varthabharthi

ಕರಾವಳಿ

ಸುಳ್ಯ: ಔಷಧಕ್ಕಾಗಿ 15 ಕಿ.ಮೀ. ನಡೆದ ವೃದ್ಧೆ!

ವಾರ್ತಾ ಭಾರತಿ : 10 Apr, 2020

ಸುಳ್ಯ, ಎ.10: ತುರ್ತು ಔಷಧ ಅಗತ್ಯವಿದ್ದುದರಿಂದ ವೃದ್ಧೆಯೊಬ್ಬರು ಬರೋಬ್ಬರಿ 15 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಿದ ಘಟನೆ ಸುಳ್ಯದಿಂದ ವರದಿಯಾಗಿದೆ.

ಕೊಲ್ಲಮೊಗ್ರದ ವೃದ್ಧೆಯೊಬ್ಬರು ಔಷಧಕ್ಕಾಗಿ ವಾಹನವಿಲ್ಲದ ಕಾರಣ 15 ಕಿ.ಮೀ. ದೂರದ ಗುತ್ತಿಗಾರಿಗೆ ನಡೆದಾಡಿಕೊಂಡೇ ಸಾಗಿದ್ದರೆನ್ನಲಾಗಿದೆ. ತುಂಬಾ ನಿತ್ರಾಣ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ. ಬಳಿಕ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಸ್ಥಳಕ್ಕೆ ಆಗಮಿಸಿ ವೃದ್ಧೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)