ಬೆಂಗಳೂರು: 2ನೇ ಅಂತಸ್ತಿನಿಂದ ಕೆಳಗೆ ಬಿದ್ದು ಆರು ತಿಂಗಳ ಮಗು ಮೃತ್ಯು
ಬೆಂಗಳೂರು, ಎ.10: ವೃದ್ಧನ ಕೈಯಲ್ಲಿದ್ದ ಆರು ತಿಂಗಳ ಮಗು ಎರಡು ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರುತಿನಗರದಲ್ಲಿ ವಾಸವಾಗಿರುವ ಟೆಕ್ಕಿಗಳಾದ ವಿನಯ್ ಹಾಗೂ ಪ್ರಿಯಾಂಕಾ ದಂಪತಿಯ ಆರು ತಿಂಗಳ ಹೆಣ್ಣು ಮಗು ಮಹಡಿಯಿಂದ ಬಿದ್ದು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ದಂಪತಿಯು ಶುಕ್ರವಾರ ಬೆಳಗ್ಗೆ ಮನೆ ಸ್ವಚ್ಛಗೊಳಿಸುವಾಗ ದೂಳಿನಿಂದ ಮಗುವಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕಾಗಿ ಮಗುವನ್ನು ಅಜ್ಜನ ಕೈಗೆ ನೀಡಿದ್ದಾರೆ. ಈ ವೇಳೆ ಮಗುವನ್ನು ಎರಡನೆ ಅಂತಸ್ತಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ ಪರಿಣಾಮ ಅಜ್ಜನ ಕೈಯಲ್ಲಿದ್ದ ಮಗು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story