ಕಾಸರಗೋಡು : ಇಂದು ಮೂವರಲ್ಲಿ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ ಮೂವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೆ ತಲಪಿದೆ.
ಮುಳಿಯಾರು ಪೊವ್ವಲ್ ನ ಇಬ್ಬರು ಮಹಿಳೆಯರು, ಕಾಸರಗೋಡು ನಗರಸಭಾ ವ್ಯಾಪ್ತಿಯ ತಳಂಗರೆಯ ಬಾಲಕ ಒಳಗೊಂಡಿದ್ದಾರೆ. ಮೂವರಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ಕೇರಳದಲ್ಲಿ ಶುಕ್ರವಾರ 7 ಪ್ರಕರಣ ಪತ್ತೆಯಾಗಿವೆ. ಕಣ್ಣೂರು ಮತ್ತು ಮಲಪ್ಪುರಂ ತಲಾ ಎರಡು ಪ್ರಕರಣ ದೃಢಪಟ್ಟಿವೆ.
ಜಿಲ್ಲೆಯಲ್ಲಿ 10721 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 260 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. 138 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story