ಮೈಸೂರು: 8 ವರ್ಷದ ಬಾಲಕ ಸೇರಿ ಐವರಿಗೆ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಮೈಸೂರು,ಎ.10: ಮೈಸೂರಿನಲ್ಲಿ 8 ವರ್ಷದ ಬಾಲಕ ಸೇರಿದಂತೆ ಐದು ಮಂದಿಗೆ ಕೊರೋನ ಪಾಸಿಟಿವ್ ಕಂಡು ಬಂದಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ.
ಈಗಾಗಲೇ ಕೊರೋನ ಸೋಂಕಿತರ ಹತ್ತಿರದ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಅವರ ಅವಧಿ ಮುಗಿದ ನಂತರ ರಕ್ತ ಮತ್ತು ಗಂಟಲಿನ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಅದರಂತೆ ಇಂದು ಐದು ಮಂದಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಅವರೆಲ್ಲರೂ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ 3,449 ಮಂದಿಯನ್ನು ಕ್ವಾರಂಟೈನ್ಗೊಳಿಸಲಾಗಿದ್ದು, 1,577 ಮಂದಿ 14 ದಿನಗಳ ಅವಧಿ ಮುಗಿಸಿದ್ದಾರೆ. 1,831 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದು, 569 ಮಂದಿಯ ಸ್ಯಾಂಪಲ್ ಪರೀಕ್ಷೆ ನಡೆದಿದ್ದು, 527ಮಂದಿಗೆ ನೆಗೆಟೀವ್ ಬಂದಿದೆ. ಒಟ್ಟು 42 ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
Next Story