ಫ್ಯಾಕ್ಟ್ ಚೆಕ್: ಹಿಟ್ ಆ್ಯಂಡ್ ರನ್ ಘಟನೆಗೆ ಕೋಮು ಬಣ್ಣ ನೀಡಿದ ಜಾಲತಾಣಿಗರು
ಹೊಸದಿಲ್ಲಿ: ಕಾರೊಂದು ಹಠಾತ್ತನೆ ರಸ್ತೆ ಬದಿಗೆ ತಿರುಗಿ ಪಾದಚಾರಿಗಳಿಬ್ಬರನ್ನು ಸಾಯಿಸಿದ ವೀಡಿಯೋವೊಂದು ವೈರಲ್ ಆಗಿದೆ. ಕಾರಿನ ಚಾಲಕ ಮುಸ್ಲಿಂ ಮಹಿಳೆ ಮತ್ತಾಕೆಯ ಅಪ್ರಾಪ್ತೆ ಪುತ್ರಿಯನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾನೆಂಬ ಸಂದೇಶವೂ ಈ ವೀಡಿಯೋ ಜತೆ ಹರಿದಾಡುತ್ತಿದೆ. ದೇಶದಲ್ಲಿ ಇಸ್ಲಾಮೋಫೋಬಿಯ ಅಥವಾ ಇಸ್ಲಾಂ ಕುರಿತಾದ ದ್ವೇಷ ಭಾವನೆ ಹೆಚ್ಚಾಗುತ್ತಿದೆ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ ಎಂದು ಹಲವು ಸಾಮಾಜಿಕ ಜಾಲತಾಣಿಗರು ಹೇಳಿಕೊಂಡಿದ್ದಾರೆ.
ಮಾರ್ಚ್ 27ರಂದು ಯೂತ್ ಟಿವಿ ನ್ಯೂಸ್ ಎಂಬ ಫೇಸ್ ಬುಕ್ ಪುಟ ಈ ವೀಡಿಯೋ ಪೋಸ್ಟ್ ಮಾಡಿ ಹೀಗೆ ಬರೆದಿತ್ತು. “ಈ ವೀಡಿಯೋ ಉತ್ತರ ಪ್ರದೇಶದ್ದು. ಆಲ್ಟೋ ಕಾರಿನ ಚಾಲಕ ಮುಸ್ಲಿಂ ಮಹಿಳೆ ಮತ್ತಾಕೆಯ ಅಪ್ರಾಪ್ತೆ ಬಾಲಕಿಯನ್ನು ಉದ್ದೇಶಪೂರ್ವಕವಾಗಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದಿಂದ ಸಾಯಿಸಿರಬಹುದು.'' ಈ ಪೋಸ್ಟ್ ಅನ್ನು 2,800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಫೇಸ್ ಬುಕ್ ಪೇಜ್ ನ್ಯೂಸ್ ಐಡಲ್ ಕೂಡ ಇದೇ ವೀಡಿಯೋ ಶೇರ್ ಮಾಡಿ ಹಿಂದಿಯಲ್ಲಿ ವಿವರಣೆ ನೀಡಿತ್ತು.
ಆದರೆ ಇದು ಸುಳ್ಳೆಂದು altnews.in ಕಂಡು ಹಿಡಿದಿದೆ. ಈ ಘಟನೆಯ ಸಂತ್ರಸ್ತರು ಹಿಂದು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಪ್ರಿಲ್ 26, 2020ರಂದು ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಸ್ರಾ ಪಟ್ಟಣದಲ್ಲಿ ಈ ಹಿಟ್ ಎಂಡ್ ರನ್ ಘಟನೆ ನಡೆದಿತ್ತು. ಮನೆಗೆ ಮರಳುತ್ತಿದ್ದ ಉಷಾ ದೇವಿ ಹಾಗೂ ಆಕೆಯ 12 ವರ್ಷದ ಪುತ್ರಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದು ಬಲ್ಲಿಯಾ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂಬ ಮಾಹಿತಿಯೂ ದೊರಕಿದೆ.
This incident in Rasra area of Ballia district in UP doesn't seem to be just an accident. A woman and her minor daughter was killed in the accident. Would request @uppolice to deeply look into this matter. @Benarasiyaa @shaileshNBT
— Kanwardeep singh (@KanwardeepsTOI) April 26, 2020
See the Alto car
Disturbing visuals: pic.twitter.com/ELNvjVQ0hz
— Ballia Police (@balliapolice) April 28, 2020