ಅಬುಧಾಬಿ: ಕೊರೋನವೈರಸ್ಗೆ ಭಾರತೀಯ ಶಿಕ್ಷಕಿ ಬಲಿ
ಅಬುಧಾಬಿ, ಎ. 30: ಅಬುಧಾಬಿ ಭಾರತೀಯ ಶಾಲೆಯ ಇಂಗ್ಲಿಷ್ ಶಿಕ್ಷಕಿ ಪ್ರಿನ್ಸಿ ರಾಯ್ ಮ್ಯಾಥ್ಯೂ ಬುಧವಾರ ರಾತ್ರಿ ಕೊರೋನ ವೈರಸ್ನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಪತಿ ರಾಯ್ ಮ್ಯಾಥ್ಯೂಸ್ ಸಾಮುಯೆಲ್ ಗಲ್ಫ್ ನ್ಯೂಸ್ಗೆ ತಿಳಿಸಿದ್ದಾರೆ.
ಕೇರಳದವರಾಗಿರುವ ಶಿಕ್ಷಕಿ ಮೂವರು ಮಕ್ಕಳನ್ನು ಅಗಲಿದ್ದಾರೆ.
ಒಂದು ವಾರದ ಮೊದಲು ಅವರಲ್ಲಿ ಜ್ವರ ಕಾಣಿಸಿಕೊಂಡಿತು. ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ಹಾಗೂ ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಬಳಿಕ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತು ಎಂದು ಸಾಮುಯೆಲ್ ಹೇಳಿದರು. ಕುಟುಂಬದ ಇತರ ಸದಸ್ಯರು ಆರೋಗ್ಯವಾಗಿದ್ದಾರೆ ಎಂದರು.
Next Story