varthabharthiಕ್ರೀಡೆ

ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ಸಾನಿಯಾ ನಾಮನಿರ್ದೇಶನ

ವಾರ್ತಾ ಭಾರತಿ : 30 Apr, 2020

ಹೊಸದಿಲ್ಲಿ, ಎ.30: ಟೆನಿಸ್ ಸ್ಟಾರ್ ಸಾನಿಯಾ ಮಿರ್ಝಾ ಇಂಡೋನೇಶ್ಯದ ಪ್ರಿಸ್ಕಾ ಮೆಡ್‌ಲಿನ್ ನೊಗೊರ್ಶೊ ಜೊತೆಗೂಡಿ ಏಶ್ಯ/ ಒಶಿಯಾನಿಯ ವಲಯದಿಂದ ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಮೊದಲ ಭಾರತೀಯಳೆಂಬ ಹಿರಿಮೆಗೆಪಾತ್ರರಾಗಿದ್ದಾರೆ.

ಸಾನಿಯಾ ಇತ್ತೀಚೆಗೆ ನಾಲ್ಕು ವರ್ಷಗಳ ಬಳಿಕ ಫೆಡ್ ಕಪ್‌ಗೆ ವಾಪಸಾಗಿದ್ದರು. ಭಾರತ ಮೊದಲ ಬಾರಿ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ನೆರವಾಗಿದ್ದರು.

ಅಭಿಮಾನಿಗಳಿಂದ ಆನ್‌ಲೈನ್ ಮತದಾನದ ಮೂಲಕ ಹಾರ್ಟ್ ಅವಾರ್ಡ್ಸ್ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೇ 1ರಿಂದ ಮತದಾನ ಆರಂಭವಾಗಿ, 8ರ ತನಕ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)