varthabharthiಸಿನಿಮಾ

ಮರು ಪ್ರಸಾರ ವೇಳೆಯೂ ದಾಖಲೆ ವೀಕ್ಷಕರನ್ನು ಹೊಂದಿರುವ 'ರಾಮಾಯಣ' ಧಾರಾವಾಹಿ

ವಾರ್ತಾ ಭಾರತಿ : 1 May, 2020

Photo: Twitter(@DDIndialive)

ಹೊಸದಿಲ್ಲಿ: ಮೊದಲು ಬಿಡುಗಡೆಗೊಂಡ 33 ವರ್ಷಗಳ ನಂತರ ಇದೀಗ ಮತ್ತೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಈಗಲೂ ಭಾರತೀಯ ಟೆಲಿವಿಷನ್ ಸಾಮ್ರಾಜ್ಯವನ್ನು ಆಳುತ್ತಿದೆ. ಮರು ಪ್ರಸಾರ ಆಗುತ್ತಿರುವ ರಾಮಾಯಣ ಧಾರಾವಾಹಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ವೀಕ್ಷಿಸುತ್ತಿರುವ  ಮನರಂಜನಾ ಕಾರ್ಯಕ್ರಮವಾಗಿದೆ ಎಂದು ದೂರದರ್ಶನ ಇತ್ತೀಚೆಗೆ ಟ್ವೀಟ್ ಮಾಡಿದೆಯಲ್ಲದೆ ಎಪ್ರಿಲ್ 16ರಂದು ರಾಮಾಯಣ ಧಾರಾವಾಹಿಯನ್ನು 7.7 ಕೋಟಿ ಜನರು ವೀಕ್ಷಿಸಿದ್ದಾರೆಂದು ಹೇಳಿದೆ.

ಮಾರ್ಚ್ ತಿಂಗಳಿನಿಂದ ಮರುಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ದಿನಂಪ್ರತಿ ಎರಡು ಬಾರಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ.

ರಮಾನಂದ್ ಸಾಗರ್ ಅವರ ರಚನೆ, ನಿರ್ದೇಶನ, ನಿರ್ಮಾಣದ `ರಾಮಾಯಣ' ಎಂಬತ್ತರ ದಶಕದಲ್ಲಿ ಪ್ರತಿ ರವಿವಾರ  ಬೆಳಿಗ್ಗೆ ಪ್ರಸಾರವಾಗುತ್ತಿತ್ತು. ಧಾರಾವಾಹಿಯಲ್ಲಿ ರಾಮನ ಪಾತ್ರಧಾರಿಯಾಗಿ ಅರುಣ್ ಗೋವಿಲ್, ಸೀತೆಯಾಗಿ ಚಿಖ್ಲಿಯಾ ಟೋಪಿವಾಲ ಹಾಗೂ ಲಕ್ಷ್ಮಣನಾಗಿ ಸುನಿಲ್ ಲಹ್ರಿ ನಟಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)