varthabharthiಕ್ರೀಡೆ

ತಪ್ಪೊಪ್ಪಿಕೊಂಡ ಇಟಲಿಯ ಆಟಗಾರ

2006ರ ವಿಶ್ವಕಪ್‌ನಲ್ಲಿ ಝೈದಾನ್ ಗುದ್ದಿರುವುದಕ್ಕೆ ಕಾರಣ ಬಹಿರಂಗಪಡಿಸಿದ ಇಟಲಿಯ ಮಟೆರೆಝ್

ವಾರ್ತಾ ಭಾರತಿ : 3 May, 2020

ಪ್ಯಾರಿಸ್, ಮೇ 3: ಫ್ರಾನ್ಸ್‌ನ ಖ್ಯಾತ ಫುಟ್ಬಾಲ್ ಸ್ಟಾರ್ ಝೈನುದ್ದೀನ್ ಝೈದಾನ್ ಇಟಲಿಯ ಮಾರ್ಕೊ ಮ್ಯಾಟೆರಾಝಿಗೆ ತನ್ನ ತಲೆಯಿಂದ ಗುದ್ದಿರುವುದು ಫಿಫಾ ವಿಶ್ವಕಪ್‌ನ ಅತ್ಯಂತ ಕುತೂಹಲಕಾರಿ ಘಟನೆಗಳಲ್ಲಿ ಒಂದಾಗಿದೆ.

ಅಂತರ್‌ರಾಷ್ಟ್ರೀಯ ಫುಟ್ಬಾಲ್ ಆಟಗಾರನಾಗಿ ಕೊನೆಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಫ್ರಾನ್ಸ್ ಲೆಜೆಂಡ್ ಝೈದಾನ್ 2006ರ ವಿಶ್ವಕಪ್ ಫೈನಲ್‌ನ ಹೆಚ್ಚುವರಿ ಸಮಯದಲ್ಲಿ ಇಟಲಿಯ ಡಿಫೆಂಡರ್ ಮ್ಯಾಟೆರಾಝಿ ಎದೆಗೆ ತನ್ನ ತಲೆಯಿಂದ ಗುದ್ದಿದ್ದರು. ಮಟೆರೆಝ್ ಏನೋ ಹೇಳಿದ್ದಕ್ಕೆ ಕೆರಳಿದ್ದ ಝೈದಾನ್ ಈ ರೀತಿ ವರ್ತಿಸಿದ್ದರು ಎನ್ನಲಾಗಿತ್ತು. ಫ್ರಾನ್ಸ್ ನಾಯಕ ಝೈದಾನ್ ರೆಡ್ ಕಾರ್ಡ್ ಪಡೆದಿದ್ದರು. ಇಟಲಿಯು ಪೆನಾಲ್ಟಿ ಕಿಕ್ ಮೂಲಕ ಪ್ರಶಸ್ತಿಯನ್ನು ಗೆದ್ದುಬೀಗಿತ್ತು.

ಮ್ಯಾಟೆರಾಝಿ ವಿರುದ್ಧ ಝೈದಾನ್ ಆ ರೀತಿ ಕೆರಳಲು ಕಾರಣವೇನು?. ಮ್ಯಾಟೆರಾಝಿ ಪ್ರಚೋದನಕಾರಿ ಮಾತು ಆಡಿದ್ದರೇ? ಎಂದು ಘಟನೆಯ ಬಳಿಕ ವಾರಗಳ ಕಾಲ ವದಂತಿ ಹರಡಿದ್ದವು. ಇದೀಗ ಇಟಲಿಯ ಮ್ಯಾಟೆರಾಝಿ ಅವರು ತಾನು ಝೈದಾನ್ ಸಹೋದರಿಗೆ ಅವಮಾನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇಟಲಿಯ ಮಾಧ್ಯಮದೊಂದಿಗೆ ಮಾತನಾಡಿದ ಮ್ಯಾಟೆರಾಝಿ, ‘‘ನನ್ನ ಶರ್ಟ್ ಬೇಕಾ ಎಂದು ಝೈದಾನ್  ನನ್ನಲ್ಲಿ ಕೇಳಿದ್ದರು. ನಾನು ನಿಮ್ಮ ಸಹೋದರಿಯನ್ನು ಬಯಸುವೆ ಎಂದು ನಾನು ಹೇಳಿದ್ದೆ’’ ಎಂದು ವಿಶ್ವಕಪ್ ವೇಳೆ ನಡೆದಿರುವ ಹಳೆಯ ಘಟನೆಯನ್ನು ಬಹಿರಂಗಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)