varthabharthiಗಲ್ಫ್ ಸುದ್ದಿ

► ಹೊತ್ತಿ ಉರಿದ‌ ಗಗನಚುಂಬಿ ಕಟ್ಟಡ ► ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ

ಶಾರ್ಜಾ: 47 ಮಹಡಿಗಳ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ

ವಾರ್ತಾ ಭಾರತಿ : 6 May, 2020

ದುಬೈ, ಮೇ 6: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಶಾರ್ಜಾದಲ್ಲಿರುವ ವಾಸ್ತವ್ಯ ಕಟ್ಟಡವೊಂದರಲ್ಲಿ ಮಂಗಳವಾರ ರಾತ್ರಿ ಬೆಂಕಿ ಅಪಘಾತ ಸಂಭವಿಸಿದೆ ಎಂದು ಶಾರ್ಜಾ ಸರಕಾರದ ಮಾಧ್ಯಮ ಕಚೇರಿ ತಿಳಿಸಿದೆ.

ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.

ಶಾರ್ಜಾದ ಅಲ್ ನಹ್ದಾ ಪ್ರದೇಶದಲ್ಲಿರುವ 48 ಮಹಡಿಯ ಕಟ್ಟಡವೊಂದರಲ್ಲಿ ಬೆಂಕಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಂಕಿಯಿಂದ ಆವರಿಸಿರುವ ಕಟ್ಟಡದಿಂದ ಅವಶೇಷಗಳು ಉರುಳಿ ಬೀಳುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾದ ವೀಡಿಯೊಗಳು ತೋರಿಸುತ್ತಿವೆ.

ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ಕೂಡಲೇ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು ಎಂದು ಶಾರ್ಜಾ ಮಾಧ್ಯಮ ಕಚೇರಿ ತಿಳಿಸಿದೆ. ಬೆಂಕಿಗೆ ಏನು ಕಾರಣ ಎನ್ನುವುದನ್ನು ಅದು ತಿಳಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)