‘ಲಾಕ್ ಡೌನ್ ನಡುವೆ ಮುಸ್ಲಿಂ ಮಹಿಳೆಯರಿಂದ ಶಾಪಿಂಗ್’ ಎಂದು ವೈರಲ್ ಆಗುತ್ತಿರುವ ವಿಡಿಯೋ 2015ರದ್ದು
ಫ್ಯಾಕ್ಟ್ ಚೆಕ್
ಬುರ್ಖಾಧಾರಿ ಮಹಿಳೆಯರು ಕಟ್ಟಡವೊಂದರ ಮೊದಲ ಮಹಡಿಯಿಂದ ಇಳಿಯುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೇಶವ್ಯಾಪಿ ಲಾಕ್ಡೌನ್ ಇರುವಾಗ ಶಾಂಪಿಂಗ್ ನಲ್ಲಿ ನಿರತರಾಗಿದ್ದ ಮಹಿಳೆಯರ ಬಂಧನ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಹರಿಯಬಿಡಲಾಗುತ್ತಿದೆ.
ಆಬೀರ್ ಹಯಾತ್ ಅನ್ಸಾರಿ ಎಐಎಂಐಎಂ ಎಂಬ ಖಾತೆಯಿಂದ ಈ ವಿಡಿಯೊ ತುಣುಕು ಶೇರ್ ಮಾಡಲಾಗಿದ್ದು, “ಧರ್ಮ, ಧರ್ಮ ಮತ್ತು ಕೇವಲ ಧರ್ಮ” ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಮಹಿಳೆ ಲಾಕ್ಡೌನ್ ವೇಳೆ ಶಾಪಿಂಗ್ಗಾಗಿ ಹೊರಬಂದಿದ್ದಾರೆ. ಪೊಲೀಸರು ಮಳಿಗೆಯ ಮಾಲಕರನ್ನು ಹೊರಹಾಕಿ ಮಹಿಳೆಯನ್ನು ಅಂಗಡಿಯ ಒಳಗೆ ಕೂಡಿಹಾಕಿದರು ಎಂದು ಟ್ವೀಟ್ ಮಾಡಲಾಗಿತ್ತು. ಆ ಟ್ವೀಟ್ ಇದೀಗ ಡಿಲೀಟ್ ಆಗಿದ್ದರೂ, ಅದೇ ಶೀರ್ಷಿಕೆಯನ್ನು ಹಲವರು ಬಳಸಿಕೊಂಡಿದ್ದಾರೆ.
ವಾಸ್ತವವೇನು?
ಲೈಕ್ ಆಲ್ ಪೇಜ್ ಎಂಬ ಫೇಸ್ ಬುಕ್ ಪೇಜ್ನಿಂದಲೂ ಇದನ್ನು ಶೇರ್ ಮಾಡಲಾಗಿದೆ. ಈ ಬಗ್ಗೆ altnews.in ಫ್ಯಾಕ್ಟ್ ಚೆಕ್ ನಡೆಸಿದೆ. ಗೂಗಲ್ ಮ್ಯಾಪ್ನ ಲೊಕೇಶನ್ ಪ್ರಕಾರ ಈ ವಾಣಿಜ್ಯ ಸಂಕೀರ್ಣ ಇರುವುದು ಪಾಕಿಸ್ತಾನದ ಕರಾಚಿಯ ರಕ್ಷಣಾ ಪ್ರಾಧಿಕಾರದ ವಾಣಿಜ್ಯ ಪ್ರದೇಶದಲ್ಲಿ. ಇದು ಹಾಟ್ ಎನ್ ಸ್ಪೈಸಿ ಎನ್ನುವ ಕಟ್ಟಡದ ಬಲಪಕ್ಕಕ್ಕಿದೆ. ಗೂಗಲ್ ಮ್ಯಾಪ್ಸ್ ಪ್ರಕಾರ ಎರಡೂ ಮಳಿಗೆಗಳು ಖಡ್ಡಾ ಮಾರುಕಟ್ಟೆಯಲ್ಲಿವೆ.
ಇಷ್ಟೇ ಅಲ್ಲದೆ ಗೂಗಲ್ ಹುಡುಕಾಟ ನಡೆಸಿದಾಗ ಈ ವಿಡಿಯೋ 2015ರದ್ದು ಎನ್ನುವುದು ಖಚಿತವಾಗಿದೆ. ಜಿಬ್ರಾನ್ ವಘಾನಿ ಎಂಬಾತ 2015ರ ಜೂನ್ 13ರಂದು ಈ ವಿಡಿಯೊ ಶೇರ್ ಮಾಡಿದ್ದರು. ಇದಕ್ಕೆ 1.8 ಲಕ್ಷ ಲೈಕ್ ಬಂದಿತ್ತು ಹಾಗೂ 5 ಸಾವಿರ ಮಂದಿ ಶೇರ್ ಮಾಡಿದ್ದರು. ಇದೀಗ 5 ವರ್ಷಗಳಷ್ಟು ಹಳೆಯ ವಿಡಿಯೋವನ್ನು ಮತ್ತೆ ಶೇರ್ ಮಾಡುತ್ತಾ ಟ್ರೋಲ್ ಗಳು ಲಾಕ್ ಡೌನ್ ಉಲ್ಲಂಘಿಸಿ ಮುಸ್ಲಿಂ ಮಹಿಳೆಯರಿಂದ ಶಾಪಿಂಗ್ ಎಂದು ಸುಳ್ಳು ಹರಡುತ್ತಿದ್ದಾರೆ.
Laka pa khazzo dona sakhtha dha?
— This Tweep.That. (@tweeep_) May 4, 2020
Dha akhthar shopping domra zaruri ee?~ pic.twitter.com/PTdZe7S0Yw