varthabharthiವಿಶೇಷ-ವರದಿಗಳು

ಫ್ಯಾಕ್ಟ್ ಚೆಕ್: 'ಮುಸ್ಲಿಂ ಯುವಕರಿಂದ ಅತ್ಯಾಚಾರ, ಹತ್ಯೆಗೊಳಗಾದ ಯುವತಿ' ಎನ್ನುವ ವೈರಲ್ ಫೋಟೊ ಸುಳ್ಳು

ವಾರ್ತಾ ಭಾರತಿ : 10 May, 2020

‘ರಾಜಸ್ಥಾನದಲ್ಲಿ ನಾಲ್ಕು ಮಂದಿ ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಯುವತಿ’ ಎಂಬ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮೇ 7ರಂದು ಟ್ವಿಟರ್ ನಲ್ಲಿ ಇದನ್ನು ಒಬ್ಬ ಶೇರ್ ಮಾಡಿದ್ದು, ಇದನ್ನು 8000 ಟ್ವಿಟ್ಟರಿಗರು ಮರುಟ್ವೀಟ್ ಮಾಡಿದ್ದಾರೆ.

ಈ ಅಮಾನುಷ ಅಪರಾಧ ಬಗ್ಗೆಗಮನ ಹರಿಸಲು ಮಾಧ್ಯಮ ವಿಫಲವಾಗಿದೆ ಎಂದು ಒಬ್ಬ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದರೆ,  “ಮಾಧ್ಯಮ ಮಂದಿ ತಣ್ಣಗಿದ್ದಾರೆ. ನಾಚಿಗೆಕೆಟ್ಟ ಮತ್ತು ಅಸಹ್ಯ ಮಂದಿ ಮಾರಾಟಕ್ಕೆ ಯೋಗ್ಯ. ಅವರು ಇದನ್ನು ಕವರ್ ಮಾಡಿಲ್ಲ ಅಥವಾ ಈ ಬಗ್ಗೆ ಒಂದು ಶಬ್ಧವೂ ಮಾತಾಡಿಲ್ಲ..ಮಾರಾಟವಾದ ಮಂದಿ.. ಬಡ ಹುಡುಗಿ ಎಂದು ಮತ್ತೋರ್ವ ಟ್ವಿಟರಿಗ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹಲವು ಮಂದಿ ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಈ ಚಿತ್ರವನ್ನು ಶೇರ್ ಮಾಡಿ ರಾಜಸ್ಥಾನದ ಅತ್ಯಾಚಾರ ಸಂತ್ರಸ್ತೆ ಎಂದು ಬಿಂಬಿಸಿದ್ದರು ಮತ್ತು ಇದೇ ಫೋಟೊವನ್ನು ಶೇರ್ ಮಾಡುತ್ತಾ ಕೋಮುದ್ವೇಷವನ್ನೂ ಹಂಚಿದ್ದಾರೆ.

ವಾಸ್ತವವೇನು?

ವಾಸ್ತವವಾಗಿ ರಾಜಸ್ಥಾನದ ಟಾಂಕ್ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬಗ್ಗೆ ವರದಿಗಳು ಪ್ರಕಟವಾಗಿವೆ. ಈ ಸಂಬಂಧ ಮೂರು ಮಂದಿಯ ಬಂಧನವೂ ಆಗಿದೆ. ಬಾಲಾಪರಾಧಿಯೊಬ್ಬನನ್ನು ಮೇ 7ರಂದು ವಶಕ್ಕೆ ಪಡೆಯಲಾಗಿದೆ.  

ಮೊದಲನೆಯದಾಗಿ ರಾಜಸ್ಥಾನ ಅತ್ಯಾಚಾರ ಸಂತ್ರಸ್ತೆ ಜೀವಂತವಿದ್ದಾಳೆ. ಎರಡನೆಯದಾಗಿ ಶೇರ್ ಮಾಡಲಾದ ಚಿತ್ರಗಳು ಹರ್ಯಾಣದ ಹಿಸ್ಸಾರ್‍ನಲ್ಲಿ ಏಪ್ರಿಲ್ 16ರಂದು ಪೊಲೀಸ್ ಪತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದ ಘಟನೆಯದ್ದಾಗಿದೆ ಎಂಬುದನ್ನು theprint.in ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ.

ಇನ್ಯಾವುದೋ ಹತ್ಯೆ ಘಟನೆಯ ಫೋಟೊಗಳನ್ನು ಶೇರ್ ಮಾಡುತ್ತಾ, ಬೇರೆಯದೇ ಘಟನೆಯ ಸಾರಾಂಶವನ್ನು ಹೇಳಿ ಅದರಲ್ಲೂ ಕೋಮುದ್ವೇಷವನ್ನು ಹರಡುವ ಮತ್ತೊಂದು ಪ್ರಯತ್ನ ಇದಾಗಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)