varthabharthiಕ್ರೀಡೆ

ಕುಕ್ ಆಯ್ಕೆಯ ಐವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ

ವಾರ್ತಾ ಭಾರತಿ : 12 May, 2020

ಲಂಡನ್, ಮೇ 11: ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್ ಕುಕ್ ಆಯ್ಕೆ ಮಾಡಿರುವ ಐವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರಿದ್ದಾರೆ. ಕೊಹ್ಲಿ ವೆಸ್ಟ್‌ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾರನ್ನು ಸ್ವಲ್ಪ ಹೋಲುತ್ತಾರೆ ಎಂದು ಕುಕ್ ಹೇಳಿದ್ದಾರೆ.

ಲಾರಾ ಪ್ರಸ್ತುತ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 400)ಗಳಿಸಿದ ಏಕೈಕ ಬ್ಯಾಟ್ಸ್‌ಮನ್. ನಿವೃತ್ತಿಗೆ ಮೊದಲು ಲಾರಾ 131 ಟೆಸ್ಟ್‌ನಲ್ಲಿ 11,953 ರನ್ ಹಾಗೂ 299 ಏಕದಿನ ಪಂದ್ಯಗಳಲ್ಲಿ 10,505 ರನ್ ಗಳಿಸಿದ್ದಾರೆ. ಕುಕ್ ಪಟ್ಟಿಯಲ್ಲಿ ಕೊಹ್ಲಿ ಅವರಲ್ಲದೆ ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಹಾಗೂ ಕುಮಾರ ಸಂಗಕ್ಕರ ಅವರಿದ್ದಾರೆ. ‘‘ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಸರಾಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಕಾರಣಕ್ಕೆ ಕೊಹ್ಲಿ ನನ್ನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ’’ ಎಂದು 59 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವವಹಿಸಿದ್ದ ಕುಕ್ ಅಭಿಪ್ರಾಯಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)