varthabharthiಕ್ರೀಡೆ

ಧೋನಿ ನಾನು ನೋಡಿದ ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್: ಗ್ರೆಗ್ ಚಾಪೆಲ್

ವಾರ್ತಾ ಭಾರತಿ : 14 May, 2020

ಸಿಡ್ನಿ, : ಎಂ.ಎಸ್. ಧೋನಿ ನಾನು ನೋಡಿದಂತಹ ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್ ಎಂದು ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಚಾಪೆಲ್ 2005 ಹಾಗೂ 2007ರ ಮಧ್ಯೆ ಭಾರತದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದರು. ಕೋಚ್ ಆಗಿದ್ದ ಅವಧಿಯಲ್ಲಿ ಅತ್ಯಂತ ಮುಖ್ಯವಾಗಿ ಆಗಿನ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸಹಿತ ಹಲವು ಹಿರಿಯ ಆಟಗಾರರೊಂದಿಗೆ ಸಂಘರ್ಷ ನಡೆಸಿದ್ದರು. ಇದೇ ವೇಳೆ, ಅವರು ಧೋನಿ ಹಾಗೂ ಸುರೇಶ್ ರೈನಾರಂತಹ ಹಲವು ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ‘‘ಧೋನಿ ಮೊದಲ ಬಾರಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿ ದಾಗ ನಾನು ಆಶ್ಚರ್ಯ ಚಕಿತನಾಗಿದ್ದೆ ಎಂದು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಆ ಕಾಲದಲ್ಲಿ ಅವರು ಭಾರತದ ಅತ್ಯಂತ ರೋಮಾಂಚಕ ಕ್ರಿಕೆಟಿಗನಾಗಿದ್ದರು. ಅವರು ಅತ್ಯಂತ ಅಸಾಮಾನ್ಯ ಸ್ಥಾನದಲ್ಲಿ ನಿಂತು ಚೆಂಡನ್ನು ದಂಡಿಸುತ್ತಿದ್ದರು. ನಾನು ಕಂಡ ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್ ಅವರಾಗಿದ್ದರು’’ಎಂದು ಚಾಪೆಲ್ ಹೇಳಿದ್ದಾರೆ.

‘‘ಧೋನಿ ಶ್ರೀಲಂಕಾದ ವಿರುದ್ಧ 183 ರನ್ ಗಳಿಸಿದ್ದಾಗ ಬೌಲರ್‌ಗಳನ್ನು ಹೇಗೆ ದಂಡಿಸಿದ್ದರು ಎನ್ನುವುದು ನನಗೀಗಲೂ ನೆನಪಿದೆ. ಅವರು ಆರಂಭದಲ್ಲಿ ಶಕ್ತಿಶಾಲಿ ಹೊಡೆತಕ್ಕೆ ಮುಂದಾಗಿದ್ದರು. ಪುಣೆಯಲ್ಲಿ ನಡೆದಿದ್ದ ಮುಂದಿನ ಪಂದ್ಯದಲ್ಲಿ ನೀವು ಪ್ರತಿ ಚೆಂಡನ್ನು ಬೌಂಡರಿಗೆ ಬಾರಿಸುವ ಬದಲು ದೀರ್ಘ ಸಮಯದ ಮೈದಾನದಲ್ಲಿ ಏಕೆ ಆಡಬಾರದು ಎಂದು ಧೋನಿಗೆ ಕೇಳಿದ್ದೆ’’ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)