varthabharthiಕ್ರೀಡೆ

ಮಗನನ್ನು ಸಾಯಿಸಿದ ಟರ್ಕಿಯ ಫುಟ್ಬಾಲ್ ಆಟಗಾರ

ವಾರ್ತಾ ಭಾರತಿ : 15 May, 2020

ಅಂಕಾರ, ಮೇ 14: ಟರ್ಕಿಯ ಫುಟ್ಬಾಲ್ ಆಟಗಾರರೊಬ್ಬರು ಮಗನಿಗೆ ಕೊರೋನ ವೈರಸ್ ಸೋಂಕು ತಗಲಿದ ಶಂಕೆ ವ್ಯಕ್ತಪಡಿಸಿ ಆತನನ್ನು ಕೊಲೆಗೈದ ಘಟನೆ ವರದಿಯಾಗಿದೆ.

32ರ ಹರೆಯದ ಸೆವೆರ್ ಟೋಕ್ಟಾಸ್ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ 5 ವರ್ಷದ ಮಗನನ್ನು ಕೊಂದಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗ ಕಾಸೀಂನನ್ನು ಕೊಂದಿರುವ ಆರೋಪದಲ್ಲಿ ಮಾಜಿ ಉನ್ನತ ಶ್ರೇಣಿಯ ಸಾಕರ್ ಆಟಗಾರ ಸೆವೆರ್ ಟೋಕ್ಟಾಸ್‌ನನ್ನು ಟರ್ಕಿ ಅಧಿಕಾರಿಗಳು ಬಂಧಿಸಿದ್ದಾರೆ. ಟೋಕ್ಟಾಸ್ ಮೇ 4 ರಂದು ತನ್ನ ಮಗ ಕಾಸಿಂನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸರಕಾರಿ ಸ್ವಾಮ್ಯದ ‘ಅನಾಡೋಲು’ ಏಜೆನ್ಸಿ ವರದಿ ಮಾಡಿದೆ.

  ಬಾಲಕನನ್ನು ಆರಂಭದಲ್ಲಿ ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಢಪಡಲಿಲ್ಲ. ಆದರೆ ಆಸ್ಪತ್ರೆಯಲ್ಲಿ ಬಾಲಕ ನಿಗೂಢವಾಗಿ ಮೃತಪಟ್ಟಿದ್ದನು. ಆದರೆ ಬಾಲಕನ ಸಾವು ಆರಂಭದಲ್ಲಿ ಅನುಮಾನಾಸ್ಪದವೆಂದು ನಂಬಲಾಗಿಲ್ಲ. ತನಿಖೆಯ ಭಾಗವಾಗಿ ಬಾಲಕನ ಮೃತದೇಹವನ್ನು ಪರೀಕ್ಷೆಗಾಗಿ ಹೊರತೆಗೆಯಲಾಗಿದೆ ಎಂದು ‘ಅನಾಡೋಲು’ ವರದಿ ಮಾಡಿದೆ.

ಪ್ರಸ್ತುತ ಹವ್ಯಾಸಿ ಲೀಗ್ ತಂಡ ಬುರ್ಸಾ ಯಿಲ್ಡಿರಿಮ್ಸ್‌ಪೊರ್ ತಂಡದ ಆಟಗಾರನಾಗಿದ್ದ ಟೋಕ್ಟಾಸ್ ತನ್ನ ಮಗನನ್ನು ಪ್ರೀತಿಸದ ಕಾರಣ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆೆ. ಆದರೆ ಬಾಲಕನನ್ನು ಕೊಲೆಗೈದು 11 ದಿನಗಳ ನಂತರ ಮಗನ ಸಾವಿನ ಬಗ್ಗೆ ಆತನಿಗೆ ಜ್ಞಾನೋದಯವಾಗಿದೆ. ತನ್ನ ತಪ್ಪಿಗಾಗಿ ನೊಂದುಕೊಂಡಿದ್ದಾನೆ. ಬಾಲಕನನ್ನು ಎಪ್ರಿಲ್ 23ರಂದು ವಾಯುವ್ಯ ಪ್ರಾಂತ್ಯದ ಬುರ್ಸಾದ ಮಕ್ಕಳ ಆಸ್ಪತ್ರೆಗೆ ಕೆಮ್ಮು ಮತ್ತು ತೀವ್ರ ಜ್ವರದ ಕಾರಣದಿಂದಾಗಿ ದಾಖಲಿಸಲಾಗಿತ್ತು. ಟರ್ಕಿಯಲ್ಲಿ ಆ ದಿನ ಸಾರ್ವತ್ರಿಕ ರಜಾದಿನವಾಗಿರುವುದರಿಂದ ಅಂದು ಇಬ್ಬರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿತ್ತು. ಅಲ್ಲಿ ಕಾಸಿಂ ಆರೋಗ್ಯ ಹದಗೆಟ್ಟಿತ್ತು. ಬಳಿಕ ಬಾಲಕನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಎರಡು ಗಂಟೆಗಳ ನಂತರ ಬಾಲಕ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

 2007 ಮತ್ತು 2009ರ ಅವಧಿಯಲ್ಲಿ ಟೋಕ್ಟಾಸ್ ಹ್ಯಾಸೆಟೆಪ್ ಸಾಕರ್ ತಂಡದ ಪರ ಆಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)