varthabharthi

ನಿಧನ

ಎಚ್. ನಿತ್ಯಾನಂದ ನಾಯಕ್

ವಾರ್ತಾ ಭಾರತಿ : 15 May, 2020

 ಹೆಬ್ರಿ, ಮೇ 15: ಹೆಬ್ರಿಯ ಖ್ಯಾತ ಜ್ಯೋತಿಷಿ ಹಾಗೂ ಹಿರಿಯ ಧಾರ್ಮಿಕ ಮುಖಂಡರಾದ ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯಎಚ್.ನಿತ್ಯಾನಂದ ನಾಯಕ್ (63) ಶುಕ್ರವಾರ ಬೆಳಗ್ಗೆ ಅನಾರೋಗ್ಯದಿಂದ ವುಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಅತ್ಯಂತ ಸರಳ ವ್ಯಕ್ವಿತ್ವದವರಾಗಿದ್ದ ನಿತ್ಯಾನಂದ ನಾಯಕ್ ತಾನು ಸಂಪಾದಿಸಿದ ಹೆಚ್ಚಿನ ಹಣವನ್ನೆಲ್ಲ ಶಾಲೆ, ಕಾಲೇಜು, ದೇವಸ್ಥಾನಗಳಿಗೆ ದಾನವಾಗಿ ನೀಡುತ್ತಿದ್ದರು.ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುತಿದ್ದ ಅವರು ಸಮಾಜಸೇವಕರಾಗಿಯೂ ಖ್ಯಾತಿ ಪಡೆದಿದ್ದರು.

ನಿತ್ಯಾನಂದ ನಾಯಕ್‌ರಿಗೆ ಪತ್ನಿ, ಓರ್ವ ಪುತ್ರ ಮತ್ತು ಒಬ್ಬರು ಪುತ್ರಿ ಇದ್ದಾರೆ. ಅವರ ಸಹೋದರಿ ಶಾಂತಿ ಬಾಯಿ ಉಡುಪಿ ಜಿಲ್ಲಾ ಪ್ರಧಾನ ನ್ಯಾಯಲಯದ ಮುಖ್ಯ ಸರಕಾರಿ ಅಭಿಯೋಜಕರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)