ಕೊರೋನ ಸೋಂಕಿನ ಬಳಿಕ ಕರ್ತವ್ಯಕ್ಕೆ ಮರಳಿದ ರಶ್ಯ ಪ್ರಧಾನಿ
ಮಾಸ್ಕೋ (ರಶ್ಯ), ಮೇ 19: ಕೊರೋನ ವೈರಸ್ನಿಂದ ಚೇತರಿಸಿಕೊಂಡಿರುವ ರಶ್ಯದ ಪ್ರಧಾನಿ ಮಿಖೈಲ್ ಮಿಶುಸ್ಟಿನ್ ಮಂಗಳವಾರ ತನ್ನ ಕರ್ತವ್ಯಕ್ಕೆ ಮರಳಿದ್ದಾರೆ.
ತನಗೆ ಕೊರೋನ ವೈರಸ್ ಸೋಂಕು ತಗಲಿದೆ ಎಂಬುದಾಗಿ ಅವರು ಮೂರು ವಾರಗಳ ಹಿಂದೆ ಟೆಲಿವಿಶನ್ನಲ್ಲಿ ಘೋಷಿಸಿದ್ದರು.
ಸರಕಾರದ ಮುಖ್ಯಸ್ಥರಾಗಿ ಮಿಶುಸ್ಟಿನ್ರನ್ನು ಮರುನೇಮಿಸುವ ಆದೇಶಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅದಕ್ಕೂ ಮೊದಲು ಸಹಿ ಹಾಕಿದರು.
ಅವರ ಅನುಪಸ್ಥಿತಿಯಲ್ಲಿ ಉಪ ಪ್ರಧಾನಿಯನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಲಾಗಿತ್ತು.
Next Story