varthabharthi


ಅಂತಾರಾಷ್ಟ್ರೀಯ

ಕಾರಣವೇನು ಗೊತ್ತಾ?

ಪ್ರತಿದಿನ ಮಲೇರಿಯಾ ಮಾತ್ರೆ ಸೇವಿಸುತ್ತಿರುವ ಟ್ರಂಪ್ !

ವಾರ್ತಾ ಭಾರತಿ : 19 May, 2020

ವಾಶಿಂಗ್ಟನ್, ಮೇ 19: ನಾನು ಮಲೇರಿಯ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್‌ನ್ನು ತೆಗೆದುಕೊಳ್ಳೂತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.

“ನಾನು ಕೊರೋನ ವೈರಸ್ ತಪಾಸಣೆಗೆ ಒಳಪಟ್ಟಿದ್ದು ನನ್ನಲ್ಲಿ ಸೋಂಕು ಕಂಡುಬಂದಿಲ್ಲ ಹಾಗೂ ಕೊರೋನ ವೈರಸ್‌ನ ಯಾವುದೇ ಲಕ್ಷಣಗಳೂ ಇಲ್ಲ. ನಾನು ಈಗ ಒಂದೂವರೆ ವಾರದಿಂದ ಮಲೇರಿಯ ಔಷಧವನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದರು.

“ನಾನು ಪ್ರತಿ ದಿನ ಒಂದು ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ. ಅದರ ಜೊತೆಗೆ ಝಿಂಕ್ ಕೂಡ ತೆಗೆದುಕೊಳ್ಳುತ್ತಿದ್ದೇನೆ” ಎಂದು ಶ್ವೇತಭವನದಲ್ಲಿ ನಡೆದ ಸಭೆಯೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಯಾಕೆಂದು ಕೇಳಿದಾಗ, ಯಾಕೆಂದರೆ, ಇದು ಒಳ್ಳೆಯದೆಂದು ನನಗನಿಸಿದೆ. ಈ ಔಷಧದ ಬಗೆಗಿನ ಹಲವಾರು ಉತ್ತಮ ಕತೆಗಳನ್ನು ನಾನು ಕೇಳಿದ್ದೇನೆ ಎಂದರು ಹೇಳಿದರು.

ಆದರೆ, ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಉಪಯುಕ್ತವಲ್ಲ ಎಂದು ಅವರ ಸರಕಾರದ ಪರಿಣತರೇ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)