varthabharthi

ಅಂತಾರಾಷ್ಟ್ರೀಯ

ಮತ್ತೆ ಹೆಚ್ಚಿದ ಆತಂಕ

ಚೀನಾ: 2ನೆ ಹಂತದ ಕೊರೋನ ರೋಗಿಗಳ ಲಕ್ಷಣಗಳಲ್ಲಿ ಹಲವು ಬದಲಾವಣೆಗಳು

ವಾರ್ತಾ ಭಾರತಿ : 20 May, 2020

ಹೊಸದಿಲ್ಲಿ: ವುಹಾನ್ ನ ಕೊರೋನ ವೈರಸ್ ರೋಗಿಗಳಲ್ಲಿದ್ದ ಲಕ್ಷಣಗಳಿಗಿಂತ ಇದೀಗ ಹೊಸದಾಗಿ ಈಶಾನ್ಯ ಪ್ರಾಂತ್ಯದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ರೋಗಿಗಳಲ್ಲಿ ವಿಭಿನ್ನ ಲಕ್ಷಣಗಳು ಗೋಚರಿಸುತ್ತಿರುವ ಬಗ್ಗೆ ಚೀನಾದ ವೈದ್ಯರುಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಜಿಲಿನ್ ಮತ್ತು ಹೀಲೋಂಗ್ ಜಿಯಾಂಗ್ ಗಳಲ್ಲಿನ ರೋಗಿಗಳು ದೀರ್ಘಕಾಲದಿಂದ ಕೊರೋನ ವೈರಸ್ ಹೊಂದಿದ್ದು, ಅವರ ವರದಿ ನೆಗೆಟಿವ್ ಎಂದೇ ಬರುತ್ತಿತ್ತು ಎಂದು ಚೀನಾದ ಪ್ರಸಿದ್ಧ ವೈದ್ಯರಲ್ಲೊಬ್ಬರಾದ ಕ್ಯೂ ಹೈಬೋ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವುಹಾನ್ ನಲ್ಲಿ ರೋಗಿಗಳಿಗೆ ಸೋಂಕು ತಗಲಿದ ಒಂದೆರಡು ವಾರಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡಿದ್ದರೆ ಈಶಾನ್ಯ ಪ್ರಾಂತ್ಯದಲ್ಲಿನ ರೋಗಿಗಳಲ್ಲಿ ಇನ್ನೂ ತಡವಾಗಿ ಲಕ್ಷಣಗಳು ಗೋಚರಿಸುತ್ತಿದೆ. ಇದರಿಂದಾಗಿ ಸೋಂಕು ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಕಷ್ಟಸಾಧ್ಯವಾಗುತ್ತಿದೆ.

ಕೊರೋನ ವೈರಸ್ ನಿಜವಾಗಿಯೂ ಬದಲಾಗುತ್ತಿದೆಯೇ ಅಥವಾ ಮೊದಲಿಗಿಂತ ಈಗ ಹೆಚ್ಚಿನ ತಪಾಸಣೆ ನಡೆಸುವುದರಿಂದ ಹೊಸ ಬದಲಾವಣೆಗಳು ಗೋಚರಿಸುತ್ತಿವೆಯೇ ಎನ್ನುವುದು ಚೀನಾದ ವಿಜ್ಞಾನಿಗಳಿಗಿನ್ನೂ ಸ್ಪಷ್ಟಗೊಂಡಿಲ್ಲ.

ಈಶಾನ್ಯ ಪ್ರಾಂತ್ಯದ ರೋಗಿಗಳಲ್ಲಿ ಹೆಚ್ಚಿನವರಲ್ಲಿ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದ್ದರೆ, ವುಹಾನ್ ನ ರೋಗಿಗಳು ಅನುಭವಿಸಿದ್ದು, ಹೃದಯ, ಮೂತ್ರಪಿಂಡ ಸೇರಿ ಬಹುಅಂಗಾಂಗ ವೈಫಲ್ಯ. ಇನ್ನು ಈ ಪ್ರಾಂತ್ಯದಲ್ಲಿ ವರದಿಯಾಗುತ್ತಿರುವ ಪ್ರಕರಣಗಳಿಗೆ ರಶ್ಯಾದಿಂದ ಬಂದ ಪ್ರವಾಸಿಗರು ಕಾರಣ ಎಂದೂ ವೈದ್ಯರು ಅಭಿಪ್ರಾಯಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)