varthabharthi

ರಾಷ್ಟ್ರೀಯ

ರಾಜೀವ್ ಗಾಂಧಿ ಪುಣ್ಯತಿಥಿಯಂದು ರಾಹುಲ್

‘ನೈಜ ದೇಶಭಕ್ತರೊಬ್ಬರ ಪುತ್ರನಾಗಿರುವುದಕ್ಕೆ ಹೆಮ್ಮೆಯಿದೆ’

ವಾರ್ತಾ ಭಾರತಿ : 21 May, 2020

ಹೊಸದಿಲ್ಲಿ: “ನೈಜ ದೇಶಭಕ್ತರೊಬ್ಬರ ಪುತ್ರನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ'' ಎಂದು ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 29ನೇ ಪುಣ್ಯತಿಥಿಯಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾಡಿದ ಟ್ವೀಟ್‍ನಲ್ಲಿ ಹೇಳಿದ್ದಾರೆ.

“ನೈಜ ದೇಶಭಕ್ತ, ಉದಾರವಾದಿ ಹಾಗೂ ಪರೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಒಬ್ಬ ಪ್ರಧಾನಿಯಾಗಿ ರಾಜೀವ್ ಜೀ ಅವರು  ಭಾರತವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದರು. ತಮ್ಮ  ದೂರದೃಷ್ಟಿಯಿಂದ ಅವರು ದೇಶದ ಸಬಲೀಕರಣಕ್ಕೆ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡರು. ಇಂದು ಅವರ ಪುಣ್ಯ ತಿಥಿಯಂದು ಅವರಿಗೆ ಪ್ರೀತಿ ಹಾಗೂ ಕೃತಜ್ಞತೆಯೊಂದಿಗೆ ಗೌರವ ಸಲ್ಲಿಸುತ್ತೇನೆ'' ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡ ಇಂದು ರಾಜೀವ್ ಗಾಂಧಿ ಅವರ ಕುರಿತು ಒಂದು ಕಿರು ವೀಡಿಯೋ ಶೇರ್ ಮಾಡಿ ಹೀಗೆ ಬರೆದಿದೆ. “ಯುವ ಭಾರತದ ನಾಡಿಮಿಡಿತವನ್ನು ಅರಿತು ನಮ್ಮನ್ನು ಉಜ್ಚಲ ಭವಿಷ್ಯದತ್ತ ಸಾಗಿಸಿದ  ವ್ಯಕ್ತಿ.  ಯುವಕರು ಹಾಗೂ ಹಿರಿಯರ ಅಗತ್ಯತೆಗಳನ್ನು ಅರಿತವರು ಹಾಗೂ ಎಲ್ಲರಿಂದಲೂ ಪ್ರೀತಿ ಪಡೆದವರು'' ಎಂದು ಪಕ್ಷ ಈ ವೀಡಿಯೋ ಜತೆಗೆ ಬರೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)