varthabharthiಸಿನಿಮಾ

ಮೋಹನ್ ಲಾಲ್ ಜನ್ಮದಿನಕ್ಕೆ ಮೆಗಾಸ್ಟಾರ್ ಶುಭಾಶಯ

ಸೋದರ ಲಾಲೇಟ್ಟನ್ ಜೊತೆಗಿನ ಬಾಂಧವ್ಯ, ಕ್ಷಣಗಳನ್ನು ಹಂಚಿಕೊಂಡ ಮಮ್ಮೂಟ್ಟಿ

ವಾರ್ತಾ ಭಾರತಿ : 21 May, 2020

ಇಂದು ಪ್ರಸಿದ್ಧ ನಟ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ 60ನೆ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಪ್ರೀತಿಯ ಗೆಳೆಯ, ಸೋದರನಿಗೆ ಮೆಗಾಸ್ಟಾರ್ ಮಮ್ಮೂಟ್ಟಿ ಶುಭಹಾರೈಸಿದ ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮಾತನಾಡಿರುವ ಮಮ್ಮೂಟ್ಟಿ, “ಇಂದು ಲಾಲ್ ನ ಜನ್ಮ ದಿನ. ನಾವು ಪರಿಚಯವಾಗಿ 33 ವರ್ಷಗಳು. ಇಂದಿಗೂ ಆ ನಂಟು ಹಾಗೆಯೇ ಇದೆ. ನನ್ನ ಸಹೋದರರು ಕರೆಯುವ ಹಾಗೆ ಲಾಲ್ ಕೂಡ ನನ್ನನ್ನು ‘ಇಚ್ಚಾಕ’ ಎಂದು ಕರೆಯುತ್ತಾರೆ. ಬೇರೆಯವರು ಹಾಗೆ ಕರೆದಾಗ ವಿಶೇಷ ಎನಿಸುವುದಿಲ್ಲ. ಆದರೆ ಲಾಲ್ ಕರೆಯುವಾಗ ತುಂಬಾ ಸಂತೋಷವಾಗುತ್ತದೆ. ನಮ್ಮಿಬ್ಬರದ್ದೂ ದೀರ್ಘ ಯಾತ್ರೆ. ನನ್ನ ಮಗನ, ಮಗಳ ಮದುವೆಯನ್ನು ಲಾಲ್ ಸ್ವಂತ ಮನೆಯ ವಿವಾಹದ ಹಾಗೆ ನಡೆಸಿಕೊಟ್ಟಿದ್ದರು. ಅಪ್ಪು (ಪ್ರಣವ್ ಮೋಹನ್ ಲಾಲ್) ಸಿನೆಮಾ ರಂಗ ಪ್ರವೇಶಿಸುವಾಗ ನನ್ನ ಮನೆಗೆ ಬಂದು ಆಶೀರ್ವಾದ ಪಡೆದಿದ್ದ. ಸಿನೆಮ ಸಂಬಂಧವನ್ನು ಮೀರಿದ ಸಂಬಂಧ ನಮ್ಮಿಬ್ಬರ ನಡುವೆ ಇದೆ.  ನಾವು ಬದುಕಿದ್ದಷ್ಟು ಕಾಲ ನಮ್ಮಿಬ್ಬರ ಯಾತ್ರೆ ಹೀಗೆಯೇ ಮುಂದುವರಿಯಲಿ. ಮಲಯಾಳದ ಅದ್ಭುತ ಕಲಾವಿದನಿಗೆ, ಲಾಲ್ ಗೆ, ಮಲಯಾಳಿಗಳ ಲಾಲೇಟ್ಟನ್ ಗೆ , ಮಲಯಾಳ ಸಿನೆಮಾ ಕಂಡ ಮಹಾನ್ ನಟನಿಗೆ, ಪ್ರೀತಿಯ ಮೋಹನ್ ಲಾಲ್ ಗೆ ಜನ್ಮ ದಿನದ ಶುಭಾಶಯಗಳು” ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)