varthabharthi

ಬೆಂಗಳೂರು

ಲಂಚ ಸ್ವೀಕಾರ ಆರೋಪ: ಎಸಿಪಿ ಸೇರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿದ ಎಸಿಬಿ

ವಾರ್ತಾ ಭಾರತಿ : 21 May, 2020

ಬೆಂಗಳೂರು, ಮೇ 21: ಸಿಗರೇಟ್ ವಿತರಕರ ಬಳಿ ಲಂಚ ಸ್ವೀಕಾರ ಆರೋಪ ಪ್ರಕರಣ ಸಂಬಂಧ ಸಿಸಿಬಿಯ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಗಳ ವಿರುದ್ಧ ಎಸಿಬಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸಿಸಿಬಿಯ ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಗಳಾದ ಅಜಯ್ ಹಾಗೂ ನಿರಂಜನ್ ಸಿಗರೇಟ್ ವಿತರಕರಿಂದ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸಿಬಿ ಅಧಿಕಾರಿಗಳು, ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ಎಸಿಪಿ ಪ್ರಭುಶಂಕರ್ ರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.

ಎಸಿಬಿ ಪಿಸಿ ಅಕ್ಟ್ (ಪ್ರಿವೆನ್ಷನ್ ಆಫ್ ಕರಪ್ಷನ್) ಅಡಿಯಲ್ಲಿ ತನಿಖೆ ನಡೆಸಲಿದ್ದು, ಸದ್ಯ ಎಸಿಬಿಗೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಕೂಡ ತನಿಖೆಯ ವರದಿ ನೀಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)