varthabharthi

ರಾಷ್ಟ್ರೀಯ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ 'ಮಹಾಭಾರತ' ಖ್ಯಾತಿಯ ಸತೀಶ್ ಕೌಲ್

ವಾರ್ತಾ ಭಾರತಿ : 22 May, 2020

 ‌ಹೊಸದಿಲ್ಲಿ,ಮೇ22: ಬಾಲಿವುಡ್, ಪಂಜಾಬ್ ಚಿತ್ರರಂಗ, ಕಿರುತೆರೆಯ ಮಹಾಭಾರತ ದಲ್ಲಿ ನಟನಾಗಿ ಗಮನಸೆಳೆದಿರುವ ಸತೀಶ್ ಕೌಲ್ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ 65 ವಯಸ್ಸಿನ ಸತೀಶ್ ಕೌಲ್,ಈ ಹಿಂದೆ ನಾನು ವೃದ್ಧಾಶ್ರಮದಲ್ಲಿದ್ದೆ.ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಲುಧಿಯಾನದ ಚಿಕ್ಕದಾದ ಕೊಠಡಿಯಲ್ಲಿ ವಾಸವಾಗಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ. ಆದರೆ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಾಗಿದೆ ಎಂದರು. ಬಿಆರ್ ಚೋಪ್ರಾ ಅವರ ಮಹಾಭಾರತದಲ್ಲಿ ಇಂದ್ರನ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ಕೌಲ್ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಕಲಾವಿದರ ಕುಟುಂಬಕ್ಕೆ ಮನರಂಜನ ಉದ್ಯಮ ನೆರವು ನೀಡಬೇಕೆಂದು ಕೋರಿದ್ದಾರೆ.

ನಾನು ಔಷಧಗಳು, ದಿನಸಿಗಳು ಹಾಗೂ ಅಗತ್ಯವಸ್ತುಗಳಿಲ್ಲದೆ ಸಮಸ್ಯೆಯಲ್ಲಿದ್ದೇನೆ. ಚಿತ್ರೋದ್ಯಮ ನಮಗೆ ನೆರವಾಗಬೇಕೆಂದು ಮನವಿ ಮಾಡುವೆ. ನಟನಾಗಿ ನಾನು ಸಾಕಷ್ಟು ಪ್ರೀತಿ ಗಳಿಸಿದ್ದೇನೆ ಎಂದು ಕೌಲ್ ಹೇಳಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)