varthabharthiರಾಷ್ಟ್ರೀಯ

‘ಅಲ್ಲಿ ಚುನಾವಣೆ ಇದೆ’: ಪ.ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿಗೆ ಉ.ಕರ್ನಾಟಕ ನೆರೆಯ ಬಗ್ಗೆ ನೆನಪಿಸಿದ ಕಾಂಗ್ರೆಸ್

ವಾರ್ತಾ ಭಾರತಿ : 22 May, 2020

ಹೊಸದಿಲ್ಲಿ: ಚಂಡಮಾರುತಪೀಡಿತ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷವು ಟೀಕಿಸಿದೆ. ರಾಜ್ಯದಲ್ಲಿ ಅಪಾರ ಹಾನಿಗೆ ಕಾರಣವಾದ, 90 ಜನರನ್ನು ಬಲಿ ಪಡೆದ ಉತ್ತರ ಕರ್ನಾಟಕದ ನೆರೆ ಸಂದರ್ಭ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

“ಚಂಡಮಾರುತ ಪೀಡಿತ ಪಶ್ಚಿಮ ಬಂಗಾಳದ ಜೊತೆ ನಾವು ನಿಲ್ಲುತ್ತೇವೆ. ನೆರೆ ಮತ್ತು ಭೂಕುಸಿತದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಭೇಟಿ ನೀಡದ ಪ್ರಧಾನಿಯ ಪಶ್ಚಿಮ ಬಂಗಾಳ ಭೇಟಿಯನ್ನು ನಾವು ಖಂಡಿಸುತ್ತೇವೆ, ಮುಂದಿನ ವರ್ಷ ಅಲ್ಲಿ ಚುನಾವಣೆ ಇರಬಹುದು. ಆದರೆ ಇಲ್ಲೂ ಜನರು ಕಷ್ಟಪಡುತ್ತಿದ್ದಾರೆ” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)