varthabharthi

ಕರಾವಳಿ

ಪಡುಬಿದ್ರಿ: ಸ್ಕೂಟರ್ ಅಪಘಾತದಲ್ಲಿ ಕಾರ್ಮಿಕ ಸಾವು

ವಾರ್ತಾ ಭಾರತಿ : 22 May, 2020

ಪಡುಬಿದ್ರಿ: ಸ್ಕೂಟರ್ ಅಪಘಾತದಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕ ಸಾವನ್ನಪ್ಪಿದ ಘಟನೆ ಹೆಜಮಾಡಿ ಗ್ರಾಮದ ಗುಂಡಿ ಬಳಿ ಸಂಭವಿಸಿದೆ.

ಜಾರ್ಖಂಡ್ ಮೂಲದ ಸದಕತ್ತ್ ಅನ್ಸಾರಿ (38) ಎಂಬವರು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ 9ಗಂಟೆಗೆ ಸ್ಕೂಟರ್‍ನಲ್ಲಿ ಹೆಜಮಾಡಿಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ರಾತ್ರಿ 1.30ರವೇಳೆಗೆ ಮೃತr ತಮ್ಮ ಮಹಮ್ಮದ್ ಶಫೀಕ್ ಅನ್ಸಾರಿ ಹಾಗೂ ಮಹಮ್ಮದ್ ಯೂನಿಯಾ ಹುಡುಕಿದಾಗ ಹೆಜಮಾಡಿ ಗ್ರಾಮದ ಸುಲ್ತಾನ್ ರಸ್ತೆ ಹೋಗುವ ರಸ್ತೆ ತಲುಪಿದಾಗ, ಮಣ್ಣು ರಸ್ತೆ ಬದಿಯ ತೋಡಿನಲ್ಲಿ ಸದಕತ್ ಅನ್ಸಾರಿಯವರು ಸ್ಕೂಟರ್ ಬಿದ್ದು ತೀವ್ರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದು,  ವೈದ್ಯಾಧಿಕಾರಿಯವರು ಮೃತಪಟ್ಟಿರುವುದಾಗಿ ತಿಳಿಸಿದರು.

ಸ್ಕೂಟರ್‍ನ್ನು ವೇಗವಾಗಿ ಚಲಾಯಿಸಿ, ಸ್ಕಿಡ್ ಆಗಿ ಬಿದ್ದು, ಹೆಲ್ಮೆಟ್ ಹಾಕದಿದ್ದುದರಿಂದ ತಲೆಗೆ ಗಾಯಗೊಂಡು ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.  

ಮಾರು 2 ವರ್ಷಗಳಿಂದ ಹೆಜಮಾಡಿ ಗ್ರಾಮದ ಮಸೀದಿಯ ಕಟ್ಟಡದಲ್ಲಿ ಬಾಡಿಗೆಗೆ ವಾಸವಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದರು. ಮೃತರು ತನ್ನ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)