varthabharthi



ಕರಾವಳಿ

ರವಿವಾರ ಈದುಲ್ ಫಿತ್ರ್: ದ.ಕ, ಉಡುಪಿ ಖಾಝಿಗಳಿಂದ ಘೋಷಣೆ

ವಾರ್ತಾ ಭಾರತಿ : 22 May, 2020

ತ್ವಾಕ ಅಹ್ಮದ್ ಮುಸ್ಲಿಯಾರ್, ಅಲ್‌ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್

ಮಂಗಳೂರು, ಮೇ 22: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗಿಲ್ಲ. ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಶವ್ವಾಲ್ 1 ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ರವಿವಾರ ಈದುಲ್ ಫಿತ್ರ್ ಆಚರಿಸಲು ಖಾಝಿಗಳಾದ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್, ಅಲ್‌ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಮತ್ತು ಅಸ್ಸಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಕರೆ ನೀಡಿದ್ದಾರೆ ಎಂದು ಪ್ರತ್ಯೇಕ ಪ್ರಕಟನೆ ತಿಳಿಸಿದೆ.

ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗದ ಕಾರಣ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಶವ್ವಾಲ್ 1,  ರವಿವಾರ ಈದುಲ್ ಫಿತ್ರ್ ಆಚರಿಸಲು ಉಳ್ಳಾಲ ಸಹಾಯಕ ಖಾಝಿ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್ ರವರು ತೀರ್ಮಾನಿಸಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)