varthabharthi

ಕರಾವಳಿ

ಕೋಳಿ ಅಂಕ: 10 ಮಂದಿ ಬಂಧನ

ವಾರ್ತಾ ಭಾರತಿ : 22 May, 2020

ಹೆಬ್ರಿ, ಮೇ 22: ನಾಡ್ಪಾಲು ಗ್ರಾಮದ ಅಜ್ಜೋಳ್ಳಿ ಎಂಬಲ್ಲಿ ಕೋಳಿ ಅಂಕ ನಡೆಸುತ್ತಿದ್ದ 10 ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿದ್ಯಾನಂದ ಪೂಜಾರಿ(30), ಸುದರ್ಶನ್(35), ಸುಧಾಕರ (38), ಪ್ರಕಾಶ್(35), ಸುರೇಶ್(30), ರವಿ(30), ರಮೇಶ್(43), ಶುಭಕರ(46), ರಾಘುವೇಂದ್ರ(34), ಮಹೇಶ್ ೂಜಾರಿ(36) ಎಂದು ಗುರುತಿಸಲಾಗಿದೆ.

ಬಂಧಿತರಿಂದ 4 ಕೋಳಿ ಹುಂಜಗಳು ಹಾಗೂ 10,150ರೂ. ನಗದು, ನಾಲ್ಕು ಬಾಳುಗಳು ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)