varthabharthi

ಕರಾವಳಿ

ಪಾಸ್ ಇಲ್ಲದೆ ಹೊರರಾಜ್ಯದಿಂದ ಅಕ್ರಮ ಪ್ರವೇಶ: ಪ್ರಕರಣ ದಾಖಲು

ವಾರ್ತಾ ಭಾರತಿ : 22 May, 2020

ಗಂಗೊಳ್ಳಿ, ಮೇ 22: ಸೇವಾಸಿಂಧು ಮೂಲಕ ಪಾಸ್ ಪಡೆದುಕೊಳ್ಳದೆ ಅಕ್ರಮವಾಗಿ ಉಡುಪಿ ಜಿಲ್ಲೆಗೆ ಪ್ರವೇಶ ಮಾಡಿರುವ ಬೈಂದೂರು ತಾಲೂಕಿನ ಪಡುಕೋಣೆಯ ಮಂಜುನಾಥ್ ಪೂಜಾರಿ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಪೂಜಾರಿ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ಹೊರ ರಾಜ್ಯದಿಂದ ಕಾನೂನು ಬಾಹಿರವಾಗಿ ಮೇ 19ರಂದು ಉಡುಪಿ ಜಿಲ್ಲೆಯಲ್ಲಿ ರುವ ತನ್ನ ಊರಿಗೆ ಬಂದಿದ್ದು, ಈ ಬಗ್ಗೆ ಬೈಂದೂರು ತಹಶೀಲ್ದಾರ್‌ಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ದೂರಿದ್ದರು.

ಅದರಂತೆ ತಹಶೀಲ್ದಾರ್ ಪರಿಶೀಲಿಸಿ, ಮಂಜುನಾಥ ಪೂಜಾರಿ ಸರಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ನಿರ್ಣಯಕ್ಕೆ ವಿರುದ್ಧವಾಗಿ ನಡೆದು ಕೊಂಡಿರುವುದಾಗಿ ದೂರು ನೀಡಿದ್ದಾರೆ. ಆರೋಪಿ ವಿರುದ್ದ ಕಲಂ: 188, 269, 270 ಐಪಿಸಿ ಕಲಂ 51 ಡಿಸಾಸ್ಟರ್ ಮೆನೇಜ್ಮೆಂಟ್ ಆಕ್ಟ್ 2005 ರಂತೆ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)