varthabharthi

ಕರಾವಳಿ

ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಚಾಲಕ ವಶಕ್ಕೆ

ವಾರ್ತಾ ಭಾರತಿ : 22 May, 2020

ಬೈಂದೂರು, ಮೇ 21: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬೈಂದೂರು ಪೊಲೀಸರು ಮೇ 21ರಂದು ಶಿರೂರು ಗ್ರಾಮದ ಕಳಿಹಿತ್ಲು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂದಾಪುರ ಆಹಾರ ನಿರೀಕ್ಷಕ ಪ್ರಕಾಶ್ ಬಿ. ಹಾಗೂ ಬೈಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮಹೀಂದ್ರಾ ಕಂಪೆನಿಯ ಮ್ಯಾಕ್ಸಿಮೊ ವಾಹನದಲ್ಲಿ 33 ಚೀಲಗಳಲ್ಲಿ 1586.500 ಕೆಜಿ ಅಕ್ಕಿಯನ್ನು ಸಾಗಿಸುತ್ತಿದ್ದ ಚಾಲಕ ಕಿರಿಮಂಜೇಶ್ವರ ಅಗಸ್ತೇಶ್ವರ ಕಾಲೋನಿಯ ಆಯೂಬ್(32) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈತ ಮನೆ ಮನೆಗೆ ತೆರಳಿ ಸರಕಾರದಿಂದ ಉಚಿತವಾಗಿ ನೀಡುವ ಅಕ್ಕಿ ಯನ್ನು ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)