ಬೆಳ್ತಂಗಡಿಯ ಮಹಿಳೆಗೆ ಕೊರೋನ ಸೋಂಕು : ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿಕೆ
ಕಡಂದಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೂ ಸೋಂಕು
ಮಂಗಳೂರು, ಮೇ 22: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಂದು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಈ ಮಧ್ಯೆ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಕಡಂದಲೆಯ ಶಾಲೆಯೊಂದರ ಕ್ವಾರಂಟೈನ್ಲ್ಲಿದ್ದ 55ರ ಹರೆಯದ ವ್ಯಕ್ತಿಗೂ ಕೊರೋನ ಪಾಸಿಟಿವ್ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 63ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 50, ಉತ್ತರ ಕನ್ನಡ 2, ಮುಂಬೈ 2, ಕಾರ್ಕಳ 3, ಕಲಬುರ್ಗಿ 1, ಕಾಸರಗೋಡು ಜಿಲ್ಲೆಯ 4 ಪ್ರಕರಣ ಸೇರಿದೆ.
ಮೇ 18ರಂದು ಮುಂಬೈಯ ಥಾಣೆ-ದೊಂಬಿವಿಲಿಯಿಂದ ಬಂದಿದ್ದ 29 ವರ್ಷ ಪ್ರಾಯದ ಮಹಿಳೆಗೆ ಸೋಂಕು ತಗುಲಿರುವುದು ಶುಕ್ರವಾರ ದೃಢಗೊಂಡಿವೆ. ಮುಂಬೈಯಿಂದ ಬಂದಿದ್ದ ಇವರು ಜಿಲ್ಲಾಡಳಿತ ವತಿಯಿಂದ ಸಿದ್ಧಪಡಿಸಲಾದ ಬೆಳ್ತಂಗಡಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇವರ ಗಂಟಲಿನ ದ್ರವದ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಇರುವುದು ಬೆಳಕಿಗೆ ಬಂದಿದೆ.
Next Story