varthabharthi

ಕರಾವಳಿ

​ಕೋವಿಡ್-19: ಬ್ಯಾಂಕ್ ಸಿಬ್ಬಂದಿಗಳಿಗೆ ಸನ್ಮಾನ

ವಾರ್ತಾ ಭಾರತಿ : 22 May, 2020

ಮಂಗಳೂರು, ಮೇ 22: ಕೋವಿಡ್ ಸಂದರ್ಭ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿ ವರ್ಗದ ಪರವಾಗಿ ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ಯೋಗಿಶ್ ಅಚಾರ್ಯ ಅವರನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ ಪ್ರತಿನಿಧಿಯಾಗಿ ಮತ್ತು ಕದ್ರಿ ಶಾಖೆಯ ಮುಖ್ಯ ಪ್ರಬಂಧಕ ರಂಜನ್ ಕೇಟರ್ ಹಾಗೂ ಶಾಖೆಯ ಎಲ್ಲಾ ಸಿಬ್ಬಂದಿಗಳನ್ನು ಶಾಸಕ ವೇದವ್ಯಾಸ ಕಾಮತ್‌ ಕದ್ರಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು ಕೋವಿಡ್ ವಾರಿಯರ್ಸ್‌ನಂತೆ ಬ್ಯಾಂಕ್ ಸಿಬ್ಬಂದಿ ವರ್ಗ ಕೂಡ ಸನ್ಮಾನಕ್ಕೆ ಯೋಗ್ಯರು ಎಂದು ಪ್ರಶಂಸಿಸದರು.

ಈ ಸಂದರ್ಭ ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಪ್ರವೀಣ್ ಎಂಪಿ, ಸಹಾಯಕ ಮಹಾ ಪ್ರಬಂಧಕ ಪುಪ್ಪರಾಜ್ ಹೆಗ್ಡೆ, ರಮಾಕಾಂತ್ ಭಟ್ ಹಾಗೂ ಅಮೂಲ್ಯಾ ಮತ್ತಿತರರು ಉಪಸ್ಥಿರಿದ್ದರು.

ಬ್ಯಾಂಕ್‌ನ ಗ್ರಾಹಕರಾದ ಹೇಮಂತ ಬಿಡ ಮತ್ತು ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)