varthabharthi

ಕರಾವಳಿ

ಮಂಗಳೂರು: ಕೆಲಸಕ್ಕೆ ಎಂದು ತೆರಳಿದ ಯುವತಿ ನಾಪತ್ತೆ

ವಾರ್ತಾ ಭಾರತಿ : 22 May, 2020

ಮಂಗಳೂರು, ಮೇ 22: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ ವಿನುತಾ ಮೇರಿ (23) ಎಂಬಾಕೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

ಮೇ 20ರಂದು ಪಡೀಲ್ ಬಳಿಯ ತನ್ನ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಈಕೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.

5.5 ಅಡಿ ಎತ್ತರ, ಬಿಳಿ ಮೈ ಬಣ್ಣ , ಸಾಧಾರಣ ಮೈಕಟ್ಟು, ಕುತ್ತಿಗೆಯ ಬಲಬದಿಯಲ್ಲಿ ಎಳ್ಳು ಮಚ್ಚೆ ಗುರುತು ಇದೆ. ಕಪ್ಪುಬಣ್ಣದ ಚುಕ್ಕೆ ಇರುವ ಸಲ್ವಾರ್ ಮತ್ತು ಪ್ಯಾಂಟ್ ಧರಿಸಿದ್ದು ಕನ್ನಡ, ತುಳು ಮಾತನಾಡುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)