varthabharthi

ಕರಾವಳಿ

​ಯುವ ಕಾಂಗ್ರೆಸ್‌ನಿಂದ ‘ನ್ಯಾಯ್’ ಅಭಿಯಾನ

ವಾರ್ತಾ ಭಾರತಿ : 22 May, 2020

ಮಂಗಳೂರು, ಮೇ 22: ನೋಬೆಲ್ ಪ್ರಶಸ್ತಿ ಪುರಸ್ಕೃತ, ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರ ಸಲಹೆ ಸೂಚನೆ ಮೇರೆಗೆ ಕಾಂಗ್ರೆಸ್ ರೂಪಿಸಿದ್ದ ‘ನ್ಯಾಯ್’ ಯೋಜನೆ ಅಂದರೆ ದೇಶದ ಜನರು, ಕಾರ್ಮಿಕರು ಹಸಿವಿನಿಂದಿರಬಾರದು ಮತ್ತು ಕಾರ್ಮಿಕರು ಸಂಕಷ್ಟ ಎದುರಿಸಬಾರದು ಎಂಬುದನ್ನು ಕೇಂದ್ರ ಸರಕಾರ ಎಂದು ಒತ್ತಾಯಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ನಿರ್ದೇಶನದ ಮೇರೆಗೆ ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈಯ ನೇತೃತ್ವದಲ್ಲಿ ಗುರುವಾರ ನಗರದಲ್ಲಿ 60 ಕೂಲಿ ಕಾರ್ಮಿಕರಿಗೆ, ರಿಕ್ಷಾ ಮತ್ತು ಟೆಂಪೋ ಚಾಲಕರಿಗೆ ತಲಾ 200 ರೂ.ವನ್ನು (ನ್ಯಾಯ್ ಯೋಜನೆಯ 1 ದಿನದ ವೇತನ)ವಿತರಿಸಲಾಯಿತು.

ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ, ಸೌಹಾನ್, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)