varthabharthiಕರಾವಳಿ

ಕೇಂದ್ರ ಮಾರುಕಟ್ಟೆ ಸ್ಥಳಾಂತರ ಪ್ರಕರಣ: ಒಂದು ರಿಟ್ ಆರ್ಜಿ ವಜಾ

ವಾರ್ತಾ ಭಾರತಿ : 22 May, 2020

ಮಂಗಳೂರು, ಮೇ.22:ಮಂಗಳೂರು ಕೇಂದ್ರ ಮಾರುಕಟ್ಟೆಗೆ ಸಂಬಂಧಿಸಿಂದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಜರ್ನಾದನ ಸಾಲ್ಯಾನ್ ರಿಟ್ (ರಿ.ಅ.6721/2020) ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಸದ್ರಿ ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಕ್ಕೆ (ಮಂಗಳೂರು ಮಹಾನಗರಪಾಲಿಕೆಗೆ ) ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿ ಪರಿಹರಿಸಿ ಕೊಳ್ಳಲು ಅವಕಾಶ ಕಲ್ಪಿಸಿದೆ .

ಆದರೆ ಕೇಂದ್ರ ಮಾರುಕಟ್ಟೆಯ ಸ್ಥಳಾಂತರ ಮತ್ತು ಕಟ್ಟಡ ಕೆಡಹುವ ಸಮಸ್ಯೆಗಳ ಬಗ್ಗೆ ಈಗಾಗಲೇ ಪ್ರತ್ಯೇಕವಾಗಿ ಈ ಹಿಂದೆ ಸಲ್ಲಿಸಲಾದ ರಿಟ್ ಅರ್ಜಿ 6725/2020,ಮತ್ತು 7015/2020 ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹಾನಗರಪಾಲಿಕೆಯ ಕ್ರಮದ ವಿರುದ್ಧ ಈಗಾಗಲೆ ತಡೆಯಾಜ್ಞೆ ನೀಡಿದೆ. ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರನ್ನು ಬಲವಂತವಾಗಿ ಸ್ಥಳಾಂತರ ಮಾಡುವುದಕ್ಕೆ ಹಾಗೂ ಕಟ್ಟಡವನ್ನು ನೆಲಸಮ ಮಾಡದಂತೆ ಆದೇಶ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು