varthabharthi

ಕರಾವಳಿ

ಬಂಟ್ವಾಳ ತಾಲೂಕು ಮುಸ್ಲಿಂ ಜಮಾಅತ್ ವತಿಯಿಂದ ಈದ್ ಕಿಟ್ ವಿತರಣೆ

ವಾರ್ತಾ ಭಾರತಿ : 23 May, 2020

ಬಿ.ಸಿ.ರೋಡ್, ಮೇ 23: ಬಂಟ್ವಾಳ ತಾಲೂಕು ಮುಸ್ಲಿಂ ಜಮಾಅತ್ ವತಿಯಿಂದ ನೂರಾರು ನಿರ್ಗತಿಕ ಕುಟುಂಬಗಳಿಗೆಈದ್ ಕಿಟ್ ವಿತರಿಸಲಾಯಿತು.

ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಮೌಲಾನ ಶಾಫಿ ಸಅದಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದರು

ಮುಂದಿನ ದಿನಗಳಲ್ಲಿ ತಾಲೂಕು ಮುಸ್ಲಿಂ ಸಮಿತಿಯು, ಸಮಾಜದ ಎಲ್ಲ ವರ್ಗದ ನಾಯಕರನ್ನು ಸೇರಿಸಿ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸಾಮಾಜಿಕ-ಆರ್ಥಿಕ ಧಾರ್ಮಿಕ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜ ಮತ್ತು ಸಮುದಾಯದ ಒಗ್ಗಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿ, ಧಾರ್ಮಿಕ ಸೌಹಾರ್ದತೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಹೇಳಿದರು.

ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ತೌಫಿಕ್ ರಫೀಕ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅನ್ವರ್ ಗೂಡಿನಬಳಿ ,ಉಪಾಧ್ಯಕ್ಷರುಗಳಾದ ಬಶೀರ್ ಹಾಜಿ ಕುಂಬ್ರ, ಮುತ್ತಲಿಬ್ ಹಾಜಿ ನಾರ್ಶ, ಇಸ್ಮಾಯೀಲ್ ಬಂಟ್ವಾಳ, ರಶೀದ್ ಒಗ್ಗ, ಇಸ್ಮಾಯೀಲ್ ಮಾಸ್ಟರ್ ಮಂಗಿಲಪದವು, ಉಸ್ಮಾನ್ ಹಾಜಿ, ಅಬೂಬಕರ್ ಕಡೇಶಿವಾಲಯ ಮುಂತಾದವರು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)