varthabharthi

ಕರಾವಳಿ

ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 65ಕ್ಕೇರಿಕೆ

ಬೆಳ್ತಂಗಡಿಯ ಮತ್ತೋರ್ವ ಮಹಿಳೆ, ಮಂಗಳೂರಿನ ಯುವಕನೋರ್ವನಲ್ಲಿ ಕೊರೋನ ಸೋಂಕು

ವಾರ್ತಾ ಭಾರತಿ : 23 May, 2020

ಮಂಗಳೂರು, ಮೇ 23: ದ.ಕ. ಜಿಲ್ಲೆಯಲ್ಲಿ ಶನಿವಾರ ಮತ್ತೆ ಎರಡು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 65ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 52, ಉತ್ತರ ಕನ್ನಡ 2, ಮುಂಬೈ 2, ಉಡುಪಿ 1, ಕಾರ್ಕಳ 3, ಕಲಬುರ್ಗಿ 1, ಕಾಸರಗೋಡು ಜಿಲ್ಲೆಯ 4 ಪ್ರಕರಣ ಸೇರಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 41ರ ಹರೆಯದ ಮಹಿಳೆಗೆ ಸೋಂಕು ತಗಲಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಇವರ ಗಂಟಲಿನ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿವೆ.

ಮುಂಬೈಯಿಂದ ಬಂದು ಮಂಗಳೂರಿನ ಕ್ವಾರಂಟೈನ್‌ನಲ್ಲಿದ್ದ 30 ವರ್ಷ ಪ್ರಾಯದ ಯುವಕನಿಗೂ ಸೋಂಕು ಇರುವುದು ಶನಿವಾರ ದೃಢಗೊಂಡಿವೆ. ಮುಂಬೈಯಿಂದ ಬಂದಿದ್ದ ಇವರು ಜಿಲ್ಲಾಡಳಿತ ವತಿಯಿಂದ ಸಿದ್ಧಪಡಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇವರ ಗಂಟಲಿನ ದ್ರವದ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಇರುವುದು ಬೆಳಕಿಗೆ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)