varthabharthiಕರ್ನಾಟಕ

ಈ 7 ರಾಜ್ಯದ ಪ್ರಯಾಣಿಕರಿಗೆ 7 ದಿನ ಮಾತ್ರ ಕ್ವಾರಂಟೈನ್

ವಾರ್ತಾ ಭಾರತಿ : 23 May, 2020

 ಪ್ರವೀಣ್ ಸೂದ್

ಬೆಂಗಳೂರು, ಮೇ 23: ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ರಾಜ್ಯ ಪೊಲೀಸ್ ಇಲಾಖೆ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ಸಡಿಲಿಕೆ ಘೋಷಿಸಿದ್ದು, 14 ದಿನಗಳ ಬದಲಿಗೆ 7 ದಿನಗಳು ಮಾತ್ರ ಕ್ವಾರಂಟೈನ್‍ನಲ್ಲಿದ್ದರೆ ಸಾಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಶನಿವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಕೇರಳ, ರಾಜಸ್ತಾನ, ದೆಹಲಿ ಹಾಗೂ ಮಧ್ಯಪ್ರದೇಶದಿಂದ ನೇರವಾಗಿ ವಿಮಾನದ ಮೂಲಕ ಬರುವ ಪ್ರಯಾಣಿಕರು 14 ದಿನಗಳ ಬದಲಿಗೆ ಏಳು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಬೇಕು. 5 ಅಥವಾ 7ನೇ ದಿನದಂದು ಕ್ವಾರಂಟೈನ್‍ನಲ್ಲಿದ್ದವರು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

ಈ ಏಳು ರಾಜ್ಯಗಳು ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವವರಿಗೆ ಇನ್‍ಸ್ಟಿಟ್ಯೂಟ್ ಕ್ವಾರಂಟೈನ್ ಅಗತ್ಯವಿಲ್ಲ. ಇವರು ನೇರವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)