varthabharthiಕರಾವಳಿ

ಮೂಡುಬಿದಿರೆ ಸಮಾಜಮಂದಿರ ಸಭಾ ಕಾರ್ಯದರ್ಶಿಯಾಗಿ ಹೆಚ್. ಸುರೇಶ್ ಪ್ರಭು

ವಾರ್ತಾ ಭಾರತಿ : 23 May, 2020

ಮೂಡುಬಿದಿರೆ: ಸಮಾಜ ಮಂದಿರ ಸಭಾದ ನೂತನ ಕಾರ್ಯದರ್ಶಿಯಾಗಿ ಪುರಸಭಾ ಸದಸ್ಯ ಎಚ್.ಸುರೇಶ್ ಪ್ರಭು ಆಯ್ಕೆಯಾಗಿದ್ದಾರೆ.
ಕಳೆದ ಶುಕ್ರವಾರ ಸಮಾಜ ಮಂದಿರದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರ ಸೂಚನೆಯಂತೆ ಹೆಚ್. ಸುರೇಶ್ ಪ್ರಭು ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿದ್ದ ಹೆಚ್. ಉದಯಶಂಕರ ಪ್ರಭು ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಈ ಆಯ್ಕೆ ನಡೆದಿದೆ. ಸುರೇಶ್ ಪ್ರಭು ಅವರು ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)