varthabharthi


ಕರ್ನಾಟಕ

ಮಂಡ್ಯ: ಕೊರೋನ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆ

ವಾರ್ತಾ ಭಾರತಿ : 24 May, 2020

ಮಂಡ್ಯ, ಮೇ 25: ಜಿಲ್ಲೆಯಲ್ಲಿ ರವಿವಾರ 15 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಕೊರೋನ ಸೋಂಕಿತರ ಸಂಖ್ಯೆ 250ಕ್ಕೆ ಏರಿದೆ. 26 ಜನ ಗುಣಮುಖರಾಗಿದ್ದು, 226 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರವಿವಾರದ ಸೋಂಕಿತರ ಪೈಕಿ 11 ಜನರು ಮುಂಬೈನಿಂದ ಬಂದವರಾಗಿದ್ದು, 4 ಮಂದಿ ರೋಗಿ 869ರ ಸಂಪರ್ಕದಲ್ಲಿದ್ದವರು. ಈ ಸೋಂಕಿತ ವ್ಯಕ್ತಿಯೂ ಮುಂಬೈನಿಂದ ಬಂದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಸೋಂಕಿತರಲ್ಲಿ 14 ಮಂದಿ ಕೆ.ಆರ್.ಪೇಟೆ ತಾಲೂಕಿನವರಾಗಿದ್ದು, ಓರ್ವ ನಾಗಮಂಗಲ ತಾಲೂಕಿನವರು ಎಂದು ಅವರು ಹೇಳಿದ್ದಾರೆ. ಮುಂಬೈನಿಂದ 1,400 ಮಂದಿ ಬಂದಿದ್ದು, ಬಹುತೇಕರ ಪರೀಕ್ಷೆ ಮುಗಿದಿದೆ. ಇನ್ನು 60-70 ಮಂದಿಯ ವರದಿ ಬರಬೇಕಿದೆ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)