ಉಡುಪಿ ಜಿಲ್ಲೆಯಲ್ಲಿ ಎಂಟು ಮಕ್ಕಳು ಸಹಿತ 16 ಮಂದಿಗೆ ಕೊರೋನ ಪಾಸಿಟಿವ್: ಡಿಸಿ ಜಗದೀಶ್
ಉಡುಪಿ, ಮೇ 25: ಉಡುಪಿ ಜಿಲ್ಲೆಯಲ್ಲಿ ಮೇ 25ರಂದು ಎಂಟು ಮಕ್ಕಳು ಸಹಿತ 16 ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಕಂಡುಬಂದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಈ 16 ಮಂದಿಯ ಪೈಕಿ 14 ಮಂದಿ ಮಹಾರಾಷ್ಟ್ರ ರಾಜ್ಯದ ವಿವಿಧ ಕಡೆ ಗಳಿಂದ ಹಾಗೂ ಇಬ್ಬರು ದುಬೈಯಿಂದ ಬಂದವರಾಗಿದ್ದಾರೆ. ಇದರಲ್ಲಿ ಆರು ಜನ ಹೆಂಗಸರು, ಎರಡು ಗಂಡಸರು ಮತ್ತು 10 ವರ್ಷದೊಳಗಿನ ಎಂಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಮೂರು ವರ್ಷದ ಹೆಣ್ಣು ಮಗು ಮತ್ತು 72 ವರ್ಷದ ವೃದ್ಧೆ ಇದ್ದಾರೆ. ಇವರನ್ನು ಉಡುಪಿ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 92ಕ್ಕೇರಿದೆ.
Next Story