varthabharthiರಾಷ್ಟ್ರೀಯ

ಫೋಟೊ ವೈರಲ್

ಸಾವಿರಾರು ಜನರು ಸೇರುವ ದಿಲ್ಲಿಯ ಜಾಮಾ ಮಸೀದಿ ಈ ಬಾರಿಯ ಈದ್ ದಿನ ಕಂಡಿದ್ದು ಹೀಗೆ…

ವಾರ್ತಾ ಭಾರತಿ : 25 May, 2020

ಹೊಸದಿಲ್ಲಿ: ಈದ್ ಸಂದರ್ಭ ಜನರಿಂದ ತುಂಬಿ ತುಳುಕುವ ದಿಲ್ಲಿಯ ಪ್ರಸಿದ್ಧ ಜಾಮಾ ಮಸೀದಿಯಲ್ಲಿ ಕೊರೋನ ವೈರಸ್ ಪರಿಣಾಮ ಈ ಬಾರಿ ಯಾರೂ ಇಲ್ಲದೆ, ಜಾಮಾ ಆವರಣ ಬಿಕೋ ಎನ್ನುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಷ್ಟು ವರ್ಷಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಜಾಮಾ ಮಸೀದಿಯ ಆವರಣದ ಇಂದಿನ ಫೋಟೊವನ್ನು ಫೋಟೊಗ್ರಾಫರ್ ಒಬ್ಬರು ಸೆರೆಹಿಡಿದ್ದಾರೆ.

“ಎಲ್ಲರಿಗೂ ಈದ್ ಮುಬಾರಕ್. ಇದು ಐತಿಹಾಸಿಕ ಕ್ಷಣ. ಬೆಳಗ್ಗೆ 7:30ಕ್ಕೆ ಸೆರೆಹಿಡಿದ ಚಿತ್ರವಿದು. ಮಸೀದಿ ಖಾಲಿಯಾಗಿದೆ. ಶಾಹಿ ಇಮಾಮ್ ಮತ್ತು ಅವರ ಕುಟುಂಬಸ್ಥರು ಮಾತ್ರ ನಮಾಝ್ ಮಾಡಿದ್ದಾರೆ” ಎಂದು ಚಿತ್ರವನ್ನು ಸೆರೆಹಿಡಿದಿರುವ ಶೊಐಬ್ ಇಲ್ಯಾಸ್ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)