ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಜಿಗಿತ
24 ಗಂಟೆಯಲ್ಲಿ ಪ್ರಕರಣಗಳ ಸಂಖ್ಯೆ 7,466ಕ್ಕೇರಿಕೆ
ಹೊಸದಿಲ್ಲಿ,ಮೇ 29: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 7,466 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದೆ ಎಂದು ಶುಕ್ರವಾರ ಬೆಳಗ್ಗೆ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿ 24 ಗಂಟೆಗಳ ಅವಧಿಯಲ್ಲಿ 7,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಸತತ ಏಳನೇ ದಿನ ದಿನವೊಂದಕ್ಕೆ 6,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನಕ್ಕೆ 175 ಜನರು ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳು 1,65,799ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 4,706ಕ್ಕೆ ತಲುಪಿದೆ. ವೈರಸ್ನಿಂದ ಚೇತರಿಸಿಕೊಂಡವರ ಸಂಖ್ಯೆ 71,106.
ಗುರುವಾರ ಸಂಜೆ ಸೋಂಕಿತರ ಸಂಖ್ಯೆ 1.6 ಲಕ್ಷ ಗಡಿ ದಾಟುತ್ತಿದ್ದಂತೆಯೇ ವಿಶ್ವದಲ್ಲಿ ಗರಿಷ್ಠ ಕೊರೋನ ಸೋಂಕಿತರಿರುವ ದೇಶಗಳ ಪೈಕಿ ಭಾರತ 9ನೇ ಸ್ಥಾನಕ್ಕೇರಿದೆ.
Next Story