varthabharthi


ಕರ್ನಾಟಕ

ರಾಯಚೂರು: ಮತ್ತೆ 62 ಜನರಿಗೆ ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 29 May, 2020

ರಾಯಚೂರು, ಮೇ 2: ರಾಯಚೂರು ಜಿಲ್ಲೆಯಲ್ಲಿ ಮತ್ತೆ 62 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. 

ಮಹಾರಾಷ್ಟ್ರದಿಂದ ಬಂದವರಿಂದಲೇ ಪಾಸಿಟಿವ್ ಪ್ರಕರಣಗಳು ಮುಂದುವರಿದಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಮೂರು ಸಾವಿರ ಜನರ ವರದಿ ಬರಬೇಕಿದೆ. ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಆತಂಕ ಹೆಚ್ಚಿಸಿದೆ.

ವ್ಯಕ್ತಿ ಸಾವು: ರಾಯಚೂರು ಜಿಲ್ಲೆಯ ಒಪೆಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ ದೇವದುರ್ಗ ತಾಲೂಕು ಕೊತ್ತದೊಡ್ಡಿ ಗ್ರಾಮದ ಶಿವಪ್ಪ ಬಲಿದೇವ(52) ಶುಕ್ರವಾರ ಮೃತಪಟ್ಟಿದ್ದಾರೆ.

ಮುಂಬೈನಿಂದ ಮರಳಿದ್ದ ಅವರನ್ನು ಕೊತ್ತದೊಡ್ಡಿಯ ಕಸ್ತೂರಿಬಾ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಶುಕ್ರವಾರ ಮೃತಪಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)