varthabharthi


ಕರ್ನಾಟಕ

ಇಂದು ಒಂದೇ ದಿನ 60 ಮಂದಿಗೆ ಕೊರೋನ ಪಾಸಿಟಿವ್

ಯಾದಗಿರಿ: ಕೊರೋನ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ

ವಾರ್ತಾ ಭಾರತಿ : 29 May, 2020

ಯಾದಗಿರಿ, ಮೇ 29: ಯಾದಗಿರಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 60 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಹಿಂತಿರುಗಿ ಬಂದ ವಲಸಿಗ ಕಾರ್ಮಿಕರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. 15 ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಲಿವೆ. ಕ್ವಾರಂಟೈನ್ ನಲ್ಲಿ ಇರುವವರಲ್ಲಿಯೇ ಕೊರೋನ ಪತ್ತೆಯಾಗಿದೆ.

ಕೊರೋನ ಸೋಂಕಿತರಲ್ಲಿ ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ 10 ಮಕ್ಕಳೂ ಸೇರಿದ್ದಾರೆ. ಈಗಾಗಲೇ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 214 ಸಕ್ರಿಯ ಪ್ರಕರಣಗಳಾಗಿದ್ದು, 7,288 ವರದಿ ಬರಲು ಬಾಕಿ ಇವೆ. ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)