varthabharthiಅಂತಾರಾಷ್ಟ್ರೀಯ

ಅಫ್ಘಾನ್: ಗಡಿ ಠಾಣೆಗಳ ಮೇಲೆ ತಾಲಿಬಾನ್ ದಾಳಿ; 14 ಸೈನಿಕರ ಸಾವು

ವಾರ್ತಾ ಭಾರತಿ : 29 May, 2020

ಕಾಬೂಲ್ (ಅಫ್ಘಾನಿಸ್ತಾನ), ಮೇ 29: ಶುಕ್ರವಾರ ಅಫ್ಘಾನಿಸ್ತಾನದ ಗಡಿ ಠಾಣೆಯೊಂದಕ್ಕೆ ನುಗ್ಗಿದ ತಾಲಿಬಾನ್ ಬಂಡುಕೋರರು ಕನಿಷ್ಠ 14 ಸೈನಿಕರನ್ನು ಕೊಂದಿದ್ದಾರೆ ಎಂದು ಬಂಡುಕೋರರು ಮತ್ತು ಸೈನಿಕರು ಹೇಳಿದ್ದಾರೆ.

ಇದರೊಂದಿಗೆ, ಈದುಲ್ ಫಿತ್ರ್ ಅವಧಿಯಲ್ಲಿ ಏರ್ಪಟ್ಟಿದ್ದ ಕಿರು ಅವಧಿಯ ಯುದ್ಧವಿರಾಮದ ಬಳಿಕ ಅಫ್ಘಾನಿಸ್ತಾನ ಸರಕಾರ ಮತ್ತು ತಾಲಿಬಾನ್ ನಡುವಿನ ಸಂಘರ್ಷ ಮುಂದುವರಿದಿದೆ.

ಪಕ್ತಿಯ ಪ್ರಾಂತದ ದಾಂಡೆ ಪತನ್ ಜಿಲ್ಲೆಯಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿರುವ ಶತ್ರುವಿನ ಠಾಣೆಗಳ ಮೇಲೆ ನಿನ್ನೆ ರಾತ್ರಿ ಮುಜಾಹಿದೀನ್‌ಗಳು ದಾಳಿ ನಡೆಸಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ಟ್ವಿಟರ್‌ನಲ್ಲಿ ಹೇಳಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)