varthabharthiಅಂತಾರಾಷ್ಟ್ರೀಯ

ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಭಾರತೀಯ ವೈದ್ಯ ಮೃತ್ಯು

ವಾರ್ತಾ ಭಾರತಿ : 29 May, 2020

ಲಂಡನ್, ಮೇ 29: ಬ್ರಿಟನ್‌ನಲ್ಲಿ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಭಾರತ ಮೂಲದ ವೈದ್ಯರೊಬ್ಬರು ಸೋಮವಾರ ಅವರು ತಂಗಿದ್ದ ಹೊಟೇಲ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಾಜೇಶ್ ಗುಪ್ತ ತನ್ನ ವೈದ್ಯಕೀಯ ಪದವಿಯನ್ನು 1997ರಲ್ಲಿ ಜಮ್ಮು ವಿಶ್ವವಿದ್ಯಾನಿಲಯದಿಂದ ಪಡೆದಿದ್ದರು. ಅವರು 2006ರಲ್ಲಿ ಬ್ರಿಟನ್‌ಗೆ ಹೊರಟರು.

ಕೊರೋನ ವೈರಸ್‌ನಿಂದ ಕುಟುಂಬ ಸದಸ್ಯರನ್ನು ರಕ್ಷಿಸುವುದಕ್ಕಾಗಿ ಅವರು ಹೊಟೇಲ್ ಕೋಣೆಯಲ್ಲಿ ತಂಗಿದ್ದರು. ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಮನೆಗೆ ಹೋಗದೆ ಹೊಟೇಲ್ ಕೋಣೆಗಳಲ್ಲಿ ವಾಸಿಸುತ್ತಾರೆ.

ಅವರ ಸಾವಿಗೆ ಈ ಹಂತದಲ್ಲಿ ಕಾರಣ ತಿಳಿದಿಲ್ಲ ಎಂದು ಫ್ರಿಮ್ಲಿ ಹೆಲ್ತ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್ ಶುಕ್ರವಾರ ತಿಳಿಸಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)