varthabharthiಕರಾವಳಿ

ಆನ್‌ಲೈನ್ ಟ್ಯಾಕ್ಸಿ ಚಾಲಕರಿಗೆ ರೇಶನ್ ಕಿಟ್ ವಿತರಣೆ

ವಾರ್ತಾ ಭಾರತಿ : 29 May, 2020

ಮಂಗಳೂರು : ಕೋವಿಡ್ 19 ನಿಗ್ರಹದ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್ ಸಂದರ್ಭ ಸಂಕಷ್ಟಕ್ಕೆ ಒಳಗಾಗಿರುವ ಆನ್‌ಲೈನ್ ಟ್ಯಾಕ್ಸಿ ಚಾಲಕರಿಗೆ ರೇಶನ್ ಮತ್ತು ತರಕಾರಿ ಕಿಟ್ ವಿತರಣೆಯ 2ನೇ ಹಂತದ ಕಾರ್ಯಕ್ರಮವು ಗುರುವಾರ ಎಮ್ಮೆಕೆರೆ ಮೈದಾನದಲ್ಲಿ ನಡೆಯಿತು.

ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಉಪಾಧ್ಯಕ್ಷ ಮುನವ್ವರ್ ಕುತ್ತಾರ್ ಅವರ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನೌಶೀರ್ ಮದನಿನಗರ, ಸಾದಿಕ್ ಎಂಕೆ ಕುತ್ತಾರ್, ಅಲ್ತಾಫ್ ಉಳ್ಳಾಲ, ಇಮ್ತಿಯಾಝ್ ಕುತ್ತಾರ್, ಗೋಪಾಲ ಕೃಷ್ಣ ಉಪಾಧ್ಯಾಯ ಹಾಗೂ ‘ಸದಖಾ ದಿ ವೇ ಆಫ್ ಲೈಫ್’ ಸಂಸ್ಥೆಯ ಸಹಕಾರದಲ್ಲಿ ಸುಮಾರು 1 ಲಕ್ಷ ರೂ. ವೆಚ್ಚದ ಕಿಟ್‌ಗಳನ್ನು 80 ಆನ್‌ಲೈನ್‌ ಟ್ಯಾಕ್ಸಿ ಚಾಲಕರಿಗೆ ವಿತರಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)