varthabharthiಗಲ್ಫ್ ಸುದ್ದಿ

ಐಒಸಿ ಬಹರೈನ್ ಚಾಪ್ಟರ್‌ನಿಂದ ವಯನಾಡ್‌ನಲ್ಲಿ ಪಿಪಿಇ ಕಿಟ್ ವಿತರಣೆ

ವಾರ್ತಾ ಭಾರತಿ : 30 May, 2020

ವಯನಾಡ್, ಮೇ 30: ರಾಹುಲ್ ಗಾಂಧಿ ಸಂಸದರಾಗಿರುವ ವಯನಾಡ್ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ) ಬಹರೈನ್ ಘಟಕದ ವತಿಯಿಂದ 500 ಪಿಪಿಇ ಕಿಟ್‌ಗಳನ್ನು ವಿತರಿಸಲಾಯಿತು.

ರಾಹುಲ್ ಗಾಂಧಿಯವರ ಸಂಸದರ ಕಚೇರಿಗೆ ತಲುಪಿದ ಪಿಪಿಇ ಕಿಟ್‌ಗಳನ್ನು ಐಒಸಿ ಬಹರೈನ್ ಘಟಕದ ಪರವಾಗಿ ವಯನಾಡ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಐ.ಸಿ.ಬಾಲಕೃಷ್ಣನ್ ಅವರು ವಯನಾಡ್ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಡಾ.ಅಧೀಲಾ ಅಬ್ದುಲ್ಲಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಲ್ಲಂಗೊ ಅವರು ಕಿಟ್‌ಗಳನ್ನು ಸ್ವೀಕರಿಸಿದರು.

ಬಹರೈನ್ ನ ಮನಮಾದಲ್ಲಿ ನಡೆದ ರಾಜೀವ್ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಐಒಸಿ ಬಹರೈನ್ ಘಟಕಾಧ್ಯಕ್ಷ ಮುಹಮ್ಮದ್ ಮನ್ಸೂರ್, ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಅವರ ಪುತ್ರ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್ ಕ್ಷೇತ್ರಕ್ಕೆ 500 ಪಿಪಿಇ ಕಿಟ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು.

ಈ ಸಂದರ್ಭ ಐಒಸಿ ಪ್ರಧಾನ ಕಾರ್ಯದರ್ಶಿ ಖುರ್ಶಿದ್ ಆಲಂ, ಬಶೀರ್ ಅಂಬಲಾಯಿ, ಉಪಾಧ್ಯಕ್ಷ ಸೋವಿಚನ್ ಚೆನ್ನತ್ತುಸ್ಸೇರಿ, ಕಾರ್ಯದರ್ಶಿ ಮುಹಮಮ್ಮದ್ ಗಯಾಝ್, ಜಯಫರ್ ಮೈದಾನಿ ಮತ್ತು ಇಬ್ರಾಹೀಂ ಅದ್ದುಹಾಂ ಉಪಸ್ಥಿತರಿದ್ದರು.

ಬಹಳ ಬೇಗ ಈ ಕಿಟ್‌ಗಳು ಅರ್ಹರ ಕೈಗೆ ತಲುಪಿದ್ದಕ್ಕೆ ಐಒಸಿ ಬಹರೈನ್ ಘಟಕಾಧ್ಯಕ್ಷ ಮನ್ಸೂರ್ ಸಂತಸ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)