varthabharthiಕರಾವಳಿ

ಮಂಗಳೂರು : ರೋಶನಿ ನಿಲಯದ ಸ್ಥಾಪಕ ಪ್ರಾಂಶುಪಾಲೆ ಡಾ. ಒಲಿಂಡಾ ಪಿರೇರ ನಿಧನ

ವಾರ್ತಾ ಭಾರತಿ : 31 May, 2020

ಮಂಗಳೂರು : ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನ ಮಾಜಿ ಪ್ರಾಂಶುಪಾಲೆ, ಸಮಾಜ ಸೇವಕಿ ಡಾ. ಒಲಿಂಡಾ ಪಿರೇರ (95) ಇಂದು ನಿಧನರಾದರು.

ವಿಶ್ವಾಸ್ ಟ್ರಸ್ಟ್ ಸಂಸ್ಥಾಪಕಿಯೂ ಆಗಿದ್ದ ಡಾ. ಒಲಿಂಡಾ ಮೈಸೂರು ವಿವಿಯ ಪಿಎಚ್ ಡಿ ಪದವೀಧರೆ.

ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ವಿವಿಗಳಲ್ಲಿ ಅಧ್ಯಯನ ನಡೆಸಿರುವ, ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅವರು ಪ್ರಾಧ್ಯಾಪಕ ರಾಗಿಯೂ ಸಾವಿರಾರು ಪದವೀಧರರಿಗೆ ಬೋಧನೆ ಮಾಡಿದ್ದಾರೆ. ಮಹಿಳಾ ಪರ ಚಟುವಟಿಕೆಗಳಲ್ಲಿ ತನ್ನ ನ್ನು ಸಕ್ರಿಯರಾಗಿಸಿದ್ದ ಡಾ. ಒಲಿಂಡಾ, 1979ರಲ್ಲಿ ರಾಷ್ಟ್ರೀಯ ಮಹಿಳಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಮ್ಮ ಮಾನವೀಯ, ಸಮಾಜ ಸೇವೆಗಾಗಿ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಸನ್ಮಾನಗಳು ಅವರಿಗೆ ದೊರಕಿವೆ.

ಜೂ. 1ರಂದು ಅಂತ್ಯ ಸಂಸ್ಕಾರ

ಡಾ. ಒಲಿಂಡಾ ಪಿರೇರ ಅವರ ಪಾರ್ಥಿವ ಶರೀರವನ್ನು ವೆಲೆನ್ಸಿಯಾದ ರೋಶನಿ ನಿಲಯದ ಸಭಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಜೂ. 1 ರಂದು ಸಂಜೆ 3.30ಕ್ಕೆ ವೆಲೆನ್ಸಿಯಾದ ದಫನ ಭೂಮಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. 

ಕೋವಿಡ್ ಹಿನ್ನೆಲೆಯಲ್ಲಿ ಅಂತಿಮ ಸಂಸ್ಕಾರದ ವೇಳೆ ಸಾರ್ವಜನಿಕ ಭೇಟಿಗೆ ಅವಕಾಶ ಇರುವುದಿಲ್ಲ. ಇಂದು ರಾತ್ರಿ 7 ಗಂಟೆ ವರೆಗೆ ಹಾಗು ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 3 ಗಂಟೆ ವರೆದ ದರ್ಶನಕ್ಕೆ ಅವಕಾಶ ನೀಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)