ಬೋಳಿಯಾರು ಗ್ರಾಮದ ಕಾಪಿಕಾಡ್ ಸೀಲ್ಡೌನ್
ಮಂಗಳೂರು, ಮೇ 31: ಬೋಳಿಯಾರ್ ಗ್ರಾಮದ ಕಾಪಿಕಾಡ್ನ ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ಅಂದರೆ 25 ಮನೆಗಳು ಸೀಲ್ಡೌನ್ ವ್ಯಾಪ್ತಿಯಲ್ಲಿ ಬರುತ್ತಿದೆ. ಅಲ್ಲದೆ 320 ಮಂದಿ ಸೀಲ್ಡೌನ್ ವ್ಯಾಪ್ತಿಯಲ್ಲಿ ನೆಲೆಸುತ್ತಿದ್ದಾರೆ. ಇವರ ಮನೆಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ದ.ಕ.ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಈ ಪ್ರದೇಶದ ಇನ್ಸಿಡೆಂಟ್ ಕಮಾಂಡರ್ ಆಗಿ ದ.ಕ.ಜಿಲ್ಲಾಧಿಕಾರಿ ನೇಮಿಸಿದ್ದಾರೆ.
Next Story